Shuru
Apke Nagar Ki App…
ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಹೀರೂರು
Mayur TV Hangal YouTube c
ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಹೀರೂರು
More news from ಕರ್ನಾಟಕ and nearby areas
- Post by Mayur TV Hangal YouTube c1
- ಸೊರಬ ತಾಲ್ಲೂಕು ಶಾಂತಪುರ ಮಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಹಾಗೂ ರಂಬಾಪುರಿ ಪೀಠದ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ|| ವೀರ ಸೋಮೇಶ್ವರ ಶಿವಾಚಾರ್ಯ ಮಹಾ ಭಗವದ್ಪಾದಂಗಳವರ ಇಷ್ಟಲಿಂಗ ಪೂಜಾ ನಿಮಿತ್ಯ ಶ್ರೀ ಜಗದ್ಗುರು ಪಂಚಾಚಾರ್ಯರ ಧ್ವಜಾರೋಹಣ ಕಾರ್ಯಕ್ರಮವು ನೆರವೇರಿತು ಧ್ವಜಾರೋಹಣವನ್ನು ಷ ಬ್ರ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಶಾಂತಪುರ ಮಠ ನೆರೆವೇರಿಸಿದರು ಸಂಗೊಳ್ಳಿ ಶ್ರೀಗಳು. ಹಾರನಹಳ್ಳಿ ಶ್ರೀಗಳು. ಕುರುವತ್ತಿ ಶ್ರೀಗಳು. ಉಪಸ್ಥಿತರಿದ್ದರು ಸುತ್ತಮುತ್ತಲಿನ ಗ್ರಾಮದ ಸದ್ಭಕ್ತರು ಭಾಗಿಯಾಗಿದ್ದರು ದಿನಾಂಕ 17-03-2026ನೇ ಮಂಗಳವಾರ ಬೆಳಿಗ್ಗೆ 9 ಕ್ಕೆ ಜಗದ್ಗುರುಗಳವರ ಸಾಮೂಹಿಕ ಇಷ್ಟ ಲಿಂಗಪೂಜಾ ಕಾರ್ಯಕ್ರಮವು ನೆರವೇರುವುದು ಸದ್ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಜಗದ್ಗುರುಗಳವರ ಕೃಪ ಆಶೀರ್ವಾದ ಪಡೆದುಕೊಳ್ಳಬಹುದು1
- Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊1
- #onlinetv24x7 #tumkur #ಶ್ರೀಶನಿಮಹಾತ್ಮ #ಶ್ರೀಶನಿದೇವ #ಶನಿಮಹಾತ್ಮ #ಶ್ರೀಕ್ಷೇತ್ರದೊಂಬರಟ್ಟಿ #ಕುಣಿಗಲ್ #ಶ್ರೀಶನಿಮಹಾತ್ಮ1
- #ವಿರಾಟ್ ಹಿಂದೂ ಸಮಾಜೋತ್ಸವ.1
- Post by Dr CP Patel 8302083835 आयुष हॉस्पिटल1
- ಶಿವಮೊಗ್ಗ: ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಮಹಾಸಭಾ ಜಿಲ್ಲಾ ಸಮಿತಿ ಹಾಗೂ ಜಿಲ್ಲೆಯ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸೋಮ ವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ತೀವ್ರ ಎಚ್ಚರಿಕೆ ನೀಡ ಲಾಯಿತು. ಒಳ ಮೀಸಲಾತಿ ಜಾರಿಗೊಳಿ ಸದೇ ಸರ್ಕಾರ ಮುಂದುವರಿದರೆ ರಾಜ್ಯಾ ದ್ಯಂತ ಉಗ್ರ ಹೋರಾಟ ನಡೆಸಲಾಗು ವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಪ್ರತಿಭಟನೆ ಬಳಿಕ ಪ್ರತಿಭಟನಾಕಾ ರರು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಮಾತನಾಡಿದ ಸಂಘಟನೆ ಗಳ ಮುಖಂಡರು, ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಯನ್ನು ಜಾರಿಗೆ ತರುವುದು ಸರ್ಕಾರದ ಚುನಾವಣಾ ಪ್ರಣಾಳಿಕೆ ಯಲ್ಲಿ ನೀಡಿದ ಪ್ರಮುಖ ಭರವಸೆ ಯಾಗಿತ್ತು. ಆದರೆ ಸರ್ಕಾರ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಳ್ಳದೆ ಕಾಲಹರಣ ಮಾಡುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾದಿಗ ಸಮುದಾಯವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ತಲತಲಾಂತರಗಳಿಂದ ಅನ್ಯಾಯ ಮತ್ತು ಶೋಷಣೆಗೆ ಒಳಗಾಗಿದ್ದು, ಸಮುದಾಯದ ಜನಸಂಖ್ಯೆಗೆ ಅನುಗುಣ ವಾಗಿ ಒಳ ಮೀಸಲಾತಿ ಕಲ್ಪಿಸಬೇಕು ಎಂಬ ಬೇಡಿಕೆಯನ್ನು ಕಳೆದ 35 ವರ್ಷಗಳಿಂದ ಹೋರಾಟದ ಮೂಲಕ ಮುಂದಿಟ್ಟು ಕೊಂಡು ಬಂದಿದೆ. ಈ ಹೋರಾಟಕ್ಕೆ ಸುಪ್ರೀಂ ಕೋರ್ಟ್ ಕೂಡ ಮಾನ್ಯತೆ ನೀಡಿದ್ದು, ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂಬ ಐತಿಹಾಸಿಕ ತೀರ್ಪನ್ನು 2024ರ ಆಗಸ್ಟ್ 1 ರಂದು ನೀಡಿದೆ ಎಂದು ಪ್ರತಿಭಟನಾಕಾರರು ಹೇಳಿದರು. ಆದರೆ ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರವೂ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುವ ವಿಷಯದಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರದೆ ಮೀನಾಮೇಷ ಎಣಿಸುತ್ತಿ ರುವುದು ಸಾಮಾಜಿಕ ನ್ಯಾಯದ ಪರವಾಗಿ ಹೋರಾಡುತ್ತಿರುವ ಸಮುದಾಯಗಳಿಗೆ ದೊಡ್ಡ ನಿರಾಶೆ ಯನ್ನುಂಟು ಮಾಡಿದೆ ಎಂದು ಮುಖಂಡರು ದೂರಿದರು. ಜಸ್ಟೀಸ್ ನಾಗಮೋಹನ್ ದಾಸ್ ಅವರ ವರದಿಯಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತು ಸ್ಪಷ್ಟ ಶಿಫಾರಸುಗಳು ನೀಡಲಾಗಿದೆ. ಶೇ.17ರಷ್ಟು ಮೀಸಲಾತಿ ಸಂಬಂಧಿಸಿದ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಇರುವುದನ್ನು ಉಲ್ಲೇಖಿಸಿದರೂ, ಈಗಿರುವ ಶೇ.15ರಷ್ಟು ಮೀಸಲಾತಿ ಯಲ್ಲಿಯೇ ಒಳ ಮೀಸಲಾತಿ ಜಾರಿಗೆ ಯಾವುದೇ ಕಾನೂನು ಅಡ್ಡಿಯಿಲ್ಲ ಎಂದು ರಾಜ್ಯದ ಅಡ್ವಕೇಟ್ ಜನರಲ್ ಕೂಡ ಸ್ಪಷ್ಟಪಡಿಸಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು. ಇಂತಹ ಪರಿಸ್ಥಿತಿಯಲ್ಲಿಯೇ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿ ಗೊಳಿಸದೇ ಸುಮಾರು 56,342 ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಮುಂದಾಗಿ ರುವುದು ಪರಿಶಿಷ್ಟ ಜಾತಿಗಳಲ್ಲಿನ ಅಸ್ಪೃಶ್ಯ ಸಮುದಾಯಗಳ ಪಾಲಿಗೆ ಮರಣ ಶಾಸನದಂತಾಗಿದೆ ಎಂದು ಅವರು ಆರೋಪಿಸಿದರು. ಒಳ ಮೀಸಲಾತಿ ಇಲ್ಲದ ಮೀಸಲಾತಿ ವ್ಯರ್ಥವಾಗುತ್ತದೆ ಮತ್ತು ಅದು ಘೋರ ಸಾಮಾಜಿಕ ಅನ್ಯಾಯ ವಾಗುತ್ತದೆ ಎಂದು ಪ್ರತಿಭಟನಾ ಕಾರರು ಹೇಳಿದರು. ಈ ಹಿನ್ನೆಲೆಯಲ್ಲಿ ಮಾ: 27ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿಗೆ ಸ್ಪಷ್ಟ ನಿರ್ಧಾರ ಕೈಗೊಳ್ಳ ಬೇಕು. ಯಾವುದೇ ಉಪಸಮಿತಿ ಅಥವಾ ಹೊಸ ಸಮಿತಿ ರಚಿಸುವ ಅವಶ್ಯಕತೆ ಇಲ್ಲ, ಏಕೆಂದರೆ ಜಸ್ಟೀಸ್ ನಾಗಮೋಹನ್ ದಾಸ್ ವರದಿಯಲ್ಲಿ ಎಲ್ಲ ವಿಷಯಗಳು ಸ್ಪಷ್ಟವಾಗಿ ಉಲ್ಲೇಖಗೊಂಡಿವೆ ಎಂದು ಮುಖಂಡರು ಒತ್ತಾಯಿಸಿದರು. ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿಗೆ ತೀರ್ಮಾನ ಕೈಗೊಂಡು, ಒಳ ಮೀಸಲಾತಿಯ ಅನ್ವಯವೇ 56,342 ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಇಲ್ಲವಾದರೆ ಮಾದಿಗ ಮಹಾಸಭಾ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟಗಳು ರಾಜ್ಯಾದ್ಯಂತ ತೀವ್ರ ಉಗ್ರ ಹೋರಾಟ ನಡೆಸಲು ತಯಾರಾಗಿವೆ ಎಂದು ಅವರು ಎಚ್ಚರಿಸಿದರು. ಪ್ರತಿಭಟನೆ ಸಂದರ್ಭದಲ್ಲಿ ಕೆಲ ಹೋರಾಟ ಗಾರರು ಜಿಲ್ಲಾಧಿಕಾರಿ ಕಚೇರಿಯ ಒಳಗೆ ನುಗ್ಗಲು ಪ್ರಯತ್ನಿಸಿದರು.ಆದರೆ ಪೊಲೀಸರು ತಕ್ಷಣವೇ ಅವರನ್ನು ತಡೆದು ಪರಿಸ್ಥಿತಿಯನ್ನು ನಿಯಂತ್ರಿ ಸಿದರು. ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾದರೂ ನಂತರ ಪರಿಸ್ಥಿತಿ ಶಾಂತಗೊಂಡಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹೆಚ್. ಶಿವಾಜಿ, ಉಪಾಧ್ಯಕ್ಷ ರಮೇಶ್ ಇ,ಪ್ರಧಾನ ಕಾರ್ಯದರ್ಶಿ ತೇಜಸ್ ಆರ್, ಖಜಾಂಚಿ ಎಂ. ಶಿವಲಿಂಗಪ್ಪ, ಜಿಲ್ಲಾ ಮುಖಂಡ ತಿಮ್ಲಾಪುರ ಲೋಕೇಶಪ್ಪ, ಮಾಜಿ ನಗರಸಭಾ ಸದಸ್ಯ ಆರ್. ಶಿವಣ್ಣ, ಡಿಎಸ್ ಎಸ್ ಸಂಚಾಲಕ ಚಿನ್ನಯ್ಯ, ಸಮಾಜದ ಪ್ರಮುಖರಾದ ಮಂಜುನಾಥ ಎಸ್, ಸೂಲಯ್ಯ, ಅಣ್ಣಪ್ಪ ಪಿ, ಟಿ.ಹೆಚ್. ಹಾಲೇಶಪ್ಪ, ಅಣ್ಣಪ್ಪ ಎ.ಕೆ, ಹೆಚ್.ಎನ್. ಪ್ರಭು, ಮಂಜಪ್ಪ ಬೀರನಕೆರೆ, ನಗರಾಧ್ಯಕ್ಷ ಅಣ್ಣಪ್ಪ ಕೆ, ಶಿಕಾರಿಪುರ ಅಧ್ಯಕ್ಷ ಮುಗಳಗೆರೆ ಬಸವರಾಜ್, ಗ್ರಾಮಾಂತರ ಅಧ್ಯಕ್ಷ ನೀಲಪ್ಪ, ರಘು, ತೀರ್ಥಹಳ್ಳಿ ತಾಲೂಕು ಅಧ್ಯಕ್ಷ ನಾಗರಾಜ್, ಭದ್ರಾವತಿ ತಾಲೂಕು ಅಧ್ಯಕ್ಷ ಮೈಲಾರಪ್ಪ, ಸೊರಬ ತಾಲೂಕು ಅಧ್ಯಕ್ಷ ಗಿಡ್ಡಪ್ಪ, ಯುವ ಘಟಕ ಜಿಲ್ಲಾಧ್ಯಕ್ಷ ನಿಖಿಲ್ ಮೂರ್ತಿ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಕೆಂಪಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.1
- Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊1