ಉಜಿರೆಯಲ್ಲಿ ಜಾತ್ರೆಗೆ ಹೋದ ಅಪ್ರಾಪ್ತನಿಗೆ ಹಲ್ಲೆ: ಕೇಸ್ ದಾಖಲು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ ಅಪ್ರಾಪ್ತ ಪ್ರಾಯದ (17 ವರ್ಷ)ಬಾಲಕನು, ದಿನಾಂಕ: 11.03.2026ರಂದು ಸಂಜೆ, ತನ್ನ ಶಾಲಾ ಸ್ನೇಹಿತರೊಂದಿಗೆ ಜಾತ್ರೆಗೆ ತೆರಳಿರುತ್ತಾನೆ. ಈ ವೇಳೆ ಜಾತ್ರಾ ಸ್ಥಳದಲ್ಲಿದ್ದ ಕೆಲವರು, ತಮ್ಮ ಧರ್ಮದ ಹುಡುಗಿಯರೊಂದಿಗೆ ಅನ್ಯ ಧರ್ಮದ ಬಾಲಕನು ಜಾತ್ರೆಗೆ ಬಂದಿರುವುದಾಗಿ ಅಕ್ಷೇಪಿಸಿ, ಬಾಲಕನಿಗೆ ಹಲ್ಲೆ ನಡೆಸಿ ನಿಂದಿಸಿರುತ್ತಾರೆ ಹಾಗೂ ಸದ್ರಿ ಬಾಲಕನನ್ನು ಅಲ್ಲಿಂದ ಬೈಕಿನಲ್ಲಿ ದೂರ ಕರೆತಂದು ಹಲ್ಲೆ ನಡೆಸಿ, ಬಾಲಕನಿಂದ ತಾನೇ ಜಾತ್ರಾ ಸ್ಥಳದಲ್ಲಿ ತಪ್ಪು ಮಾಡಿರುವುದಾಗಿ ವಿಡಿಯೋ ಹೇಳಿಕೆ ದಾಖಲಿಸಿಕೊಂಡು ಆತನನ್ನು ಕಳುಹಿಸಿರುತ್ತಾರೆ. ಈ ಘಟನೆಯಿಂದ ಬಾಲಕನು ಕೆಲದಿನಗಳಿಂದ ಭಯಭೀತನಾಗಿರುತ್ತಾನೆ ಎಂಬುದಾಗಿ ಬಾಲಕನ ತಂದೆ ದಿನಾಂಕ: 18.03.2026 ರಂದು ತಡವಾಗಿ ಬಂದು ದೂರು ನೀಡಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ ಕ್ರ 30/2026, ಕಲಂ: 137(2), 115(2), 351(2) , 352, 353(2) ಜೊತೆಗೆ 190 ಬಿಎನ್ ಎಸ್ 2023 ರಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಹೇಳಿದೆ.
ಉಜಿರೆಯಲ್ಲಿ ಜಾತ್ರೆಗೆ ಹೋದ ಅಪ್ರಾಪ್ತನಿಗೆ ಹಲ್ಲೆ: ಕೇಸ್ ದಾಖಲು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ ಅಪ್ರಾಪ್ತ ಪ್ರಾಯದ (17 ವರ್ಷ)ಬಾಲಕನು, ದಿನಾಂಕ: 11.03.2026ರಂದು ಸಂಜೆ, ತನ್ನ ಶಾಲಾ ಸ್ನೇಹಿತರೊಂದಿಗೆ ಜಾತ್ರೆಗೆ ತೆರಳಿರುತ್ತಾನೆ. ಈ ವೇಳೆ ಜಾತ್ರಾ ಸ್ಥಳದಲ್ಲಿದ್ದ ಕೆಲವರು, ತಮ್ಮ ಧರ್ಮದ ಹುಡುಗಿಯರೊಂದಿಗೆ ಅನ್ಯ ಧರ್ಮದ ಬಾಲಕನು ಜಾತ್ರೆಗೆ ಬಂದಿರುವುದಾಗಿ ಅಕ್ಷೇಪಿಸಿ, ಬಾಲಕನಿಗೆ ಹಲ್ಲೆ ನಡೆಸಿ ನಿಂದಿಸಿರುತ್ತಾರೆ ಹಾಗೂ ಸದ್ರಿ ಬಾಲಕನನ್ನು ಅಲ್ಲಿಂದ ಬೈಕಿನಲ್ಲಿ ದೂರ ಕರೆತಂದು ಹಲ್ಲೆ ನಡೆಸಿ, ಬಾಲಕನಿಂದ ತಾನೇ ಜಾತ್ರಾ ಸ್ಥಳದಲ್ಲಿ ತಪ್ಪು ಮಾಡಿರುವುದಾಗಿ ವಿಡಿಯೋ ಹೇಳಿಕೆ ದಾಖಲಿಸಿಕೊಂಡು ಆತನನ್ನು ಕಳುಹಿಸಿರುತ್ತಾರೆ. ಈ ಘಟನೆಯಿಂದ ಬಾಲಕನು ಕೆಲದಿನಗಳಿಂದ ಭಯಭೀತನಾಗಿರುತ್ತಾನೆ ಎಂಬುದಾಗಿ ಬಾಲಕನ ತಂದೆ ದಿನಾಂಕ: 18.03.2026 ರಂದು ತಡವಾಗಿ ಬಂದು ದೂರು ನೀಡಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ ಕ್ರ 30/2026, ಕಲಂ: 137(2), 115(2), 351(2) , 352, 353(2) ಜೊತೆಗೆ 190 ಬಿಎನ್ ಎಸ್ 2023 ರಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಹೇಳಿದೆ.
- ಶುಕ್ರವಾರ ರಂಝಾನ್ ಹಬ್ಬದ ಹಿನ್ನೆಲೆಯಲ್ಲಿ ಇಂದು (ಗುರುವಾರ) ಮಧ್ಯರಾತ್ರಿ 12 ಗಂಟೆ ತನಕ ಅಂಗಡಿ ಮುಂಗಟ್ಟುಗಳನ್ನು ತೆರೆದಿಡಲು ಅನುಮತಿ ನೀಡಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಗುರುವಾರ ಮಧ್ಯರಾತ್ರಿವರೆಗೆ ಅಂಗಡಿಗಳನ್ನು ತೆರೆದಿಡಲು ಹಲವರು ಮನವಿ ಮಾಡಿದ್ದರು. ಅದರಂತೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಇಂದು (ಗುರುವಾರ) ಮಧ್ಯರಾತ್ರಿ 12 ಗಂಟೆಯ ತನಕ ಅಂಗಡಿಗಳನ್ನು ತೆರೆದಿಡಲು ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.1
- ಶಿವಮೊಗ್ಗ: ನಗರದ ಉಷಾ ನರ್ಸಿಂಗ್ ಹೋಂ ಬಳಿ ಬ್ರೀಝಾ ಕಾರು ಮತ್ತು ಖಾಸಗಿ ಅಂಬ್ಯೂಲೆನ್ಸ್ ವಾಹನಗಳ ನಡುವೆ ಉಂಟಾದ ಡಿಕ್ಕಿಯಲ್ಲಿ ಬ್ರೀಝಾ ಕಾರು ಮೂರು ಪಲ್ಟಿ ಹೊಡೆದು ಯಥಾ ಸ್ಥಿತಿಯಲ್ಲಿ ನಿಂತ ಘಟನೆ ಇಂದು ಮದ್ಯಾಹ್ನ ನಡೆದಿದೆ. ಸೊರಬ ಕಡೆಯಿಂದ ಬಂದ ಅಂಬ್ಯೂಲೆನ್ಸ್ ವಾಹನ ಕಾಶೀಪುರದಿಂದ ಹನಸವಾಡಿಗೆ ಹೋಗುವಾಗ ಉಷಾ ನರ್ಸಿಂಗ್ ಹೋಂ ಬಳಿ ಬ್ರೀಝಾ ಕಾರಿಗೆ ಡಿಕ್ಕಿ ಹೊಡೆದಿದೆ. ಕಾಲಿನಲ್ಲಿ ಸುರೇಶ್, ದೀಪಾ (14) ಮಗು ಹಾಗೂ ಕಿಶನ್ ಎಂಬ 74 ವರ್ಷದ ವೃದ್ಧರಿದ್ದರು. ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಕಾರು ಪಲ್ಟಿ ಹೊಡೆದ ಪರಿಣಾಮ ಸಣ್ಣಪುಟ್ಟ ಗಾಯಗಳಾಗಿವೆ. ಕಾರಿನ ಹಿಂದಿನ ಗ್ಲಾಸ್ ಪುಡಿ ಪುಡಿಯಾಗಿದೆ. ನಾಲ್ವರನ್ನ ಉಷಾ ನರ್ಸಿಂಗ್ ಹೋಂ ನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಅಂಬ್ಯೂಲೆನ್ಸ್ ಚಾಲಕ ಸಾವಂತ್ ಗೆ ಕಾಲು ಮುರಿದಿದೆ. ತಕ್ಷಣವೇ ಮೂವರನ್ನ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪೂರ್ವ ಸಂಚಾರಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.1
- SIDDIQA HANDICAPPED WELFARE TRUST Wilson Garden Bangalore Distrubuted Ration to the members of KAVERI PHYSICALLY DISABLED WELFARE TRUST #kvnews1
- .ದಾವಣಗೆರೆ : ಎಸ್ಟಿ ಮೋರ್ಚಾ ಶ್ರೀನಿವಾಸ ದಾಸಕರಿಯಪ್ಪ ಟಿಕೆಟ್ ಸಿಕ್ಕ ಬಳಿಕ ಜೆಡಿಎಸ್ ನಾಯಕ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ನ್ನು ಸನ್ಮಾನಿಸಿದರು. ಈ ವೇಳೆ ದಕ್ಷಿಣದಲ್ಲಿ ಗೆಲ್ಲಲು ಸಹಕಾರ ನೀಡುವಂತೆ ಕೋರಿದರು1
- *ಭಾರತ ನಲ್ಲಿ ವೈರಲ್*1
- ಮೈಸೂರು: ಸಂವತ್ಸರಾದಿ (ಅಕ್ಷರಶಃ' ವರ್ಷದ ಆರಂಭ'. ಯುಗ ಎಂದರೆ "ಯುಗ" ಮತ್ತು ಆದಿ ಎಂದರೆ "ಆರಂಭ") ಎಂದೂ ಕರೆಯಲ್ಪಡುವ ಈ ಹಬ್ಬವು ಹಿಂದೂ ಕ್ಯಾಲೆಂಡರ್‌ನಲ್ಲಿ ವರ್ಷದ ಮೊದಲ ದಿನವಾಗಿದೆ ಎಂದು ವಿಜಯನಗರದ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸ್ ಹೇಳಿದರು. ಯುಗಾದಿ ಅಂಗವಾಗಿ ದೇವಾಲಯದಲ್ಲಿ ಶ್ರೀ ಸ್ವಾಮಿಗೆ ನಡೆದ ವಿಶೇಷ ಪೂಜಾ ಕೈಂಕರ್ಯದ ಬಳಿದ ಭಕ್ತಾದಿಗಳಿಗೆ ಪ್ರಸಾದ ವಿತರಿಸಿ ಅವರು ಮಾತನಾಡಿದರು. ವರ್ಷದ ಮೊದಲ ದಿನವೇ ಯುಗಾದಿ ಎಂಬುದು ಹಿಂದೂ ಧರ್ಮದ ಪ್ರತೀತಿಯಾಗಿದೆ. ಬೇವು- ಬೆಲ್ಲದ ಸಮಾಗಮದ ಈ ದಿನದಂದು ಆ ಭಗವಂತನು ಎಲ್ಲರಿಗೂ ಸರ್ವಮಂಗಳವನ್ನುಂಟು ಮಾಡಲಿ ಎಂದು ಆಶಿಸಿದರು. ಯೋಗಾನರಸಿಂಹ ಸ್ವಾಮಿ ದೇವಾಲಯದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ನೂತನ ದಿನಚರಿ ( ಕ್ಯಾಲೆಂಡರ್ ) ಅನ್ನು ದೇಗುಲದ ಸಂಸ್ಥಾಪಕರಾದ ನಾಡೋಜ ಪ್ರೊ.ಭಾಷ್ಯಂ ಸ್ವಾಮೀಜಿ ಅವರ ಅಮೃತ ಹಸ್ತದಿಂದ ಬಿಡುಗಡೆ ಮಾಡಲಾಗಿದೆ ಎಂದ ಶ್ರೀನಿವಾಸನ್ ಅವರು,ಇ ಯುಗಾದಿಯಿಂದ ಮುಂದಿನ ಸಾಲಿನ ಯುಗಾದಿವರೆಗಿನ ಧಾರ್ಮಿಕ ಪರಂಪರೆಯುಳ್ಳ, ದೇವಾಲಯದ ಎಲ್ಲ ಉತ್ಸವಗಳು ಸೇರಿದಂತೆ ಇನ್ನಿತರ ಅಗತ್ಯ ಮಾಹಿತಿಗಳು ಈ ದಿನಚರಿಯಲ್ಲಿ ಇರುವುದು ವಿಶೇಷವಾಗಿದೆ ಎಂದರು. ಈ ಒಂದು ಕಾರ್ಯಕ್ಕೆ ಎಲ್ಲಾ ರೀತಿಯ ಸಹಕಾರ ನೀಡುತ್ತಾ ಬಂದಿರುವ ನಗರದ ನಯನ ಕುಮಾರ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಕೆ.ಬಿ ಕುಮಾರ್ ಅವರ ಸೇವಾ ಕಾರ್ಯಗಳು ಹೀಗೆ ಮುಂದುವರೆಯಲಿ, ಶ್ರೀ ಸ್ವಾಮಿಯ ಆಶೀರ್ವಾದ ಸದಾ ಅವರ ಮೇಲಿರಲಿ ಹಾಗೂ ನಾಡಿನ ಎಲ್ಲ ಜನರಿಗೂ ಒಳಿತಾಗಲಿ ಎಂದು ಹಾರೈಸಿದರು. ಇದೇ ವೇಳೆ ನೂತನ ದಿನಚರಿಯನ್ನು ಬಿಡುಗಡೆ ಮಾಡಿದ ಗಣ್ಯರುಗಳು, ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ದೇವಾಲಯ ಮತ್ತಷ್ಟು ಅಭಿವೃದ್ದಿ ಹೊಂದಲಿ ಎಂದು ಆಶಿಸಿದರು. ಈ ಸಂಧರ್ಭದಲ್ಲಿ ದೇವಾಲಯದ ಸಂಸ್ಥಾಪಕರಾದ ನಾಡೋಜ ಪ್ರೊ.ಭಾಷ್ಯಂ ಸ್ವಾಮೀಜಿ, ನಯನ ಕುಮಾರ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಕೆ.ಬಿ ಕುಮಾರ್ ದಂಪತಿ, ರಘುಲಾಲ್ ಕಂಪನಿಯ ಮುಖ್ಯಸ್ಥರಾದ ರಾಘವ್ ದಂಪತಿ, ಮೈಸೂರಿನ ಪ್ರತಿಷ್ಠಿತ ಅಸ್ಕರ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಸೂರ್ಯ ನಾರಾಯಣ ರಾಜು ಅವರುಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.1
- ಹಲವು ಕಡೆ ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ 17 ಪ್ರಕರಣ ದಾಖಲು 58 ಜನರ ಬಂಧನ. ಚಳ್ಳಕೆರೆ: :ಯುಗಾದಿ ಹಬ್ಬದ ನೆಪದಲ್ಲಿ ಹಲವು ಕಡೆ ಗುಂಪು ಕಟ್ಟಿಕೊಂಡು ಇಸ್ಪೀಟ್ ಹಾಡುತ್ತಿದ್ದ ಅಡ್ಡಗಳ ಮೇಲೆ ಚಳ್ಳಕೆರೆ ಪೊಲೀಸರಿಂದ ದಾಳಿ ಮಾಡಲಾಗಿದ್ದು ಇಲ್ಲಿಯವರೆಗ 58 ಮಂದಿಯನ್ನ ಬಂಧಸಿ ಅವರಿ 85.390. ನಗದು ವಶಕ್ಕೆ ಪಡೆದು 58 ಜನರನ್ನ ಬಂಧಿಸಲಾಗಿದೆ. ಯುಗಾದಿ ಹಬ್ಬದ ಮೊದಲನೇ ದಿನವೇ ಕೆಲವು ಕಡೆ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಕಟ್ಟಿಕೊಂಡು ಇಸ್ಪೀಟ್ ಹಾಡುತ್ತಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಎಸ್ ಪಿ ರಂಜತ್ ಕುಮಾರ್ ಬಂಡಾರು ಹಾಗೂ ಚಳ್ಳಕೆರೆ ಡಿವೈಎಸ್ಪಿ ಎಂಜಿ. ಸತ್ಯನಾರಾಯಣರಾವ್ ಇವರ ಮಾರ್ಗದರ್ಶನದಲ್ಲಿ ಚಳ್ಳಕೆರೆ ಪೊಲೀಸ್ ಇನ್ಸ್ಪೆಕ್ಟರ್ ಕೆ. ಕುಮಾರ್ ಇವರ ನೇತೃತ್ವದ ತಂಡ ಚಳ್ಳಕೆರೆ ತಾಲೂಕಿನ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ ಮಾಡಲಾಗಿದ್ದು. ಇಲ್ಲಿಯವರೆಗೆ 85 ಜನರನ್ನ ಬಂಧಿಸಿ ಅವರಿಂದ 85,390 ರೂ ನಗದು ವರ್ಷಕ್ಕೆ ಪಡೆದು 17 ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.. ಈ ದಾಳಿ ವೇಳೆ ಪೋಲಿಸ್ ಇನ್ಸ್ಪೆಕ್ಟರ್ ಕೆ ಕುಮಾರ್, ಪಿಎಸ್ ಐ ಗಳಾದ ವಿರೇಶ ಧರಪ್ಪ ಬಳಪ ದೊಡ್ಡಮನಿ. ಪೊಲೀಸ್ ಸಿಬ್ಬಂದಿಗಳು ಇದ್ದರು..1
- ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ ಅಪ್ರಾಪ್ತ ಪ್ರಾಯದ (17 ವರ್ಷ)ಬಾಲಕನು, ದಿನಾಂಕ: 11.03.2026ರಂದು ಸಂಜೆ, ತನ್ನ ಶಾಲಾ ಸ್ನೇಹಿತರೊಂದಿಗೆ ಜಾತ್ರೆಗೆ ತೆರಳಿರುತ್ತಾನೆ. ಈ ವೇಳೆ ಜಾತ್ರಾ ಸ್ಥಳದಲ್ಲಿದ್ದ ಕೆಲವರು, ತಮ್ಮ ಧರ್ಮದ ಹುಡುಗಿಯರೊಂದಿಗೆ ಅನ್ಯ ಧರ್ಮದ ಬಾಲಕನು ಜಾತ್ರೆಗೆ ಬಂದಿರುವುದಾಗಿ ಅಕ್ಷೇಪಿಸಿ, ಬಾಲಕನಿಗೆ ಹಲ್ಲೆ ನಡೆಸಿ ನಿಂದಿಸಿರುತ್ತಾರೆ ಹಾಗೂ ಸದ್ರಿ ಬಾಲಕನನ್ನು ಅಲ್ಲಿಂದ ಬೈಕಿನಲ್ಲಿ ದೂರ ಕರೆತಂದು ಹಲ್ಲೆ ನಡೆಸಿ, ಬಾಲಕನಿಂದ ತಾನೇ ಜಾತ್ರಾ ಸ್ಥಳದಲ್ಲಿ ತಪ್ಪು ಮಾಡಿರುವುದಾಗಿ ವಿಡಿಯೋ ಹೇಳಿಕೆ ದಾಖಲಿಸಿಕೊಂಡು ಆತನನ್ನು ಕಳುಹಿಸಿರುತ್ತಾರೆ. ಈ ಘಟನೆಯಿಂದ ಬಾಲಕನು ಕೆಲದಿನಗಳಿಂದ ಭಯಭೀತನಾಗಿರುತ್ತಾನೆ ಎಂಬುದಾಗಿ ಬಾಲಕನ ತಂದೆ ದಿನಾಂಕ: 18.03.2026 ರಂದು ತಡವಾಗಿ ಬಂದು ದೂರು ನೀಡಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ ಕ್ರ 30/2026, ಕಲಂ: 137(2), 115(2), 351(2) , 352, 353(2) ಜೊತೆಗೆ 190 ಬಿಎನ್ ಎಸ್ 2023 ರಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಹೇಳಿದೆ.1