Shuru
Apke Nagar Ki App…
ಕುಣಿಗಲ್ : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ಇಂದು ನಡೆದ ತುಮಕೂರು ವಿಶ್ವವಿದ್ಯಾನಿ ಲಯ 2026-27ನೇ ಸಾಲಿನ ಸಾಂಸ್ಕೃತಿಕ ಕ್ರೀಡೆ ಎನ್ಎಸ್ಎಸ್ ರೋವರ್ಸ್ ಮತ್ತು ರೇಂಜರ್ಸ್ ಯುವ ರೆಡ್ ಕ್ರಾಸ್ ಐ ಕ್ಯೂ ಎ ಸಿ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ಕನ್ನಡ ರಾಜ್ಯೋತ್ಸವ ಸಮಾರಂಭ ಶಾಸಕರಾದ ಡಾ. ಎಚ್ ಡಿ ರಂಗನಾಥ್ ಉದ್ಘಾಟಿಸಿ ಮತ್ತು ದಿವ್ಯ ಸಾನಿಧ್ಯ ವಹಿಸಿರುವಂತಹ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿದರು
Gopala N
ಕುಣಿಗಲ್ : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ಇಂದು ನಡೆದ ತುಮಕೂರು ವಿಶ್ವವಿದ್ಯಾನಿ ಲಯ 2026-27ನೇ ಸಾಲಿನ ಸಾಂಸ್ಕೃತಿಕ ಕ್ರೀಡೆ ಎನ್ಎಸ್ಎಸ್ ರೋವರ್ಸ್ ಮತ್ತು ರೇಂಜರ್ಸ್ ಯುವ ರೆಡ್ ಕ್ರಾಸ್ ಐ ಕ್ಯೂ ಎ ಸಿ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ಕನ್ನಡ ರಾಜ್ಯೋತ್ಸವ ಸಮಾರಂಭ ಶಾಸಕರಾದ ಡಾ. ಎಚ್ ಡಿ ರಂಗನಾಥ್ ಉದ್ಘಾಟಿಸಿ ಮತ್ತು ದಿವ್ಯ ಸಾನಿಧ್ಯ ವಹಿಸಿರುವಂತಹ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿದರು
More news from ಕರ್ನಾಟಕ and nearby areas
- ಕುಣಿಗಲ್ : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ಇಂದು ನಡೆದ ತುಮಕೂರು ವಿಶ್ವವಿದ್ಯಾನಿ ಲಯ 2026-27ನೇ ಸಾಲಿನ ಸಾಂಸ್ಕೃತಿಕ ಕ್ರೀಡೆ ಎನ್ಎಸ್ಎಸ್ ರೋವರ್ಸ್ ಮತ್ತು ರೇಂಜರ್ಸ್ ಯುವ ರೆಡ್ ಕ್ರಾಸ್ ಐ ಕ್ಯೂ ಎ ಸಿ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ಕನ್ನಡ ರಾಜ್ಯೋತ್ಸವ ಸಮಾರಂಭ ಶಾಸಕರಾದ ಡಾ. ಎಚ್ ಡಿ ರಂಗನಾಥ್ ಉದ್ಘಾಟಿಸಿ ಮತ್ತು ದಿವ್ಯ ಸಾನಿಧ್ಯ ವಹಿಸಿರುವಂತಹ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿದರು1
- ಮೈಸೂರು ಹುಲಿ ದಾಳಿ: ಮೃತರ ಕುಟುಂಬಕ್ಕೆ 50 ಲಕ್ಷ ಪರಿಹಾರ ಘೋಷಿಸಿ ನಾಗಲಿಂಗ ಸ್ವಾಮಿ1
- ತುಮಕೂರು ಬಸ್ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರು ಬಸ್ ದರ ಏರಿಕೆ ಬಗ್ಗೆ ಪ್ರತಿಭಟನೆ *ತುಮಕೂರು ಬಸ್ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ* > ತುಮಕೂರು: ನಗರದ ಶ್ರೀ ಡಿ. ದೇವರಾಜ ಅರಸು ಬಸ್ ನಿಲ್ದಾಣದ ಎದುರು ಇಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. > > ಬಿಜೆಪಿ ಬಾವುಟ ಹಿಡಿದು, ಭಿತ್ತಿಪತ್ರ ಹಿಡಿದು ನೂರಾರು ಕಾರ್ಯಕರ್ತರು ಬಸ್ ನಿಲ್ದಾಣದ ಮುಂಭಾಗದಲ್ಲಿ ಜಮಾಯಿಸಿ ಘೋಷಣೆ ಕೂಗಿದರು. > > ಈ ಸಂದರ್ಭದಲ್ಲಿ ಪುರುಷರು ಹಾಗೂ ಮಹಿಳಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸ್ಥಳದಲ್ಲಿ ಪೊಲೀಸರು ಬಿಗಿ ಭದ್ರತೆ > ಇಂದು ತುಮಕೂರಿನ ಡಿ. ದೇವರಾಜ ಅರಸು ಬಸ್ ನಿಲ್ದಾಣದ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. > ಕೈಯಲ್ಲಿ ಬಿಜೆಪಿ ಬಾವುಟ ಹಿಡಿದು, ಭಿತ್ತಿಪತ್ರ ಹಿಡಿದು ಕಾರ್ಯಕರ್ತರು ಘೋಷಣೆ ಕೂಗಿದರು. ಈ ಪ್ರತಿಭಟನೆಯಲ್ಲಿ ಮಹಿಳೆಯರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.2
- ಕುಣಿಗಲ್ ತಾಲೂಕು ಪ್ರಭಾವಿ ಕಾಂಗ್ರೆಸ್ ಮುಖಂಡರು ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಭಾಗ್ಯಮ್ಮ ರವರ ಪತಿಕೇಪಿರೆ ಗೌಡ ಜೆಡಿಎಸ್ ಗೆ ಕುಣಿಗಲ್ ತಾಲೂಕು ಪ್ರಭಾವಿ ಕಾಂಗ್ರೆಸ್ ಮುಖಂಡರು ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಭಾಗ್ಯಮ್ಮ ರವರ ಪತಿಯವರಾದ ಕೆಂಪಿರೇಗೌಡರು,ರವರು ಕಾಂಗ್ರೆಸ್ ಪಕ್ಷವನ್ನು ತೊರೆದು ಅಧಿಕೃತವಾಗಿ ಜೆಡಿಎಸ್ ಪಕ್ಷವನ್ನು ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ರವರ ಸಮ್ಮುಖದಲ್ಲಿ ಸೇರ್ಪಡೆಗೊಂಡರು ಹಾಗೂ ವಕೀಲರಾದ ಯಲಚವಾಡಿ ಶಿವಶಂಕರ್, ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ನಾರಾಯಣ್ ಸೇರಿದಂತೆ ಹಲವು ನಾಯಕರು ಸೇರ್ಪಡೆಯಾದರು ಈ ಸಂದರ್ಭದಲ್ಲಿ ಕುಣಿಗಲ್ ಮಾಜಿ ಶಾಸಕರು ಮಾಜಿ ಸಚಿವರಾದ ಡಿ ನಾಗರಾಜಯ್ಯನವರು ಹಾಗೂ ತುಮಕೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಡಾಕ್ಟರ್ ರವಿ ಡಿ ನಾಗರಾಜಯ್ಯನವರು ಹಾಗೂ ಜಗದೀಶ್ ಡಿ ನಾಗರಾಜಯ್ಯನವರು ಹಾಗೂ ಕುಣಿಗಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರು ಉಪಸ್ಥಿತರಿದ್ದರು1
- ನವಗ್ರಹ ವಿಗ್ರಹ ಧ್ವಂಸ ಪ್ರಕರಣ ಖಂಡಿಸಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ, ಧರ್ಮ ವಿರೋಧಿ ಕೃತ್ಯಕ್ಕೆ ಕಠಿಣ ಶಿಕ್ಷೆಗೆ ಆಗ್ರಹ. ನವಗ್ರಹ ವಿಗ್ರಹ ಧ್ವಂಸ ಪ್ರಕರಣ ಖಂಡಿಸಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ, ಧರ್ಮ ವಿರೋಧಿ ಕೃತ್ಯಕ್ಕೆ ಕಠಿಣ ಶಿಕ್ಷೆಗೆ ಆಗ್ರಹ. ರಾಮನಗರದ ಕೆಂಪೇಗೌಡ ವೃತ್ತದಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಮುಂಭಾಗ, ನವಗ್ರಹ ಮೂರ್ತಿಗಳನ್ನು ಭಗ್ನಗೊಳಿಸಿರುವ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಜಾಗೃತಿ ಸಭೆ, ಪ್ರತಿಭಟನಾ ಮೆರವಣಿಗೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗೌಡಗೆರೆ ಚಾಮುಂಡೇಶ್ವರಿ ಕ್ಷೇತ್ರದ ಡಾ. ಮಲ್ಲೇಶ್ ಗುರೂಜಿ ಮಾತನಾಡಿ, ಭಾರತ ಸರ್ವ ಧರ್ಮಗಳನ್ನು ಒಳಗೊಂಡಿರುವ ದೇಶ, ಇಲ್ಲಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಸಂವಿಧಾನ ಕಲ್ಪಿಸಿದೆ, ಆದರೆ ಕೆಲವರು ಧರ್ಮ ವಿರೋಧಿ ಕಾರ್ಯಗಳನ್ನು ಮಾಡುತ್ತಾ ಸಮಾಜಕ್ಕೆ ಕಂಟಕವಾಗುತ್ತಿದ್ದಾರೆ, ಅಂತಹವರಿಗೆ ತಕ್ಕ ಶಾಸ್ತಿ ಆಗಲೇಬೇಕು, ಪೊಲೀಸರು ತನಿಖೆ ನಡೆಸಿ ಹಿಂದೆ ಇರುವವರನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ. ಎ. ಮಂಜುನಾಥ್, ಕೆಎಸ್ಐಸಿ ಮಾಜಿ ಅಧ್ಯಕ್ಷ ಗೌತಮ್ ಗೌಡ, ಹಿಂದೂ ಹಿತರಕ್ಷಣಾ ಸಮಿತಿ ಸಂಚಾಲಕ ಡಿ.ಗಿರಿಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್ ಎಲ್. ಆನಂದಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಎಚ್.ಸಿ.ಜಯಮುತ್ತು ಸೇರಿದಂತೆ ಮೈತ್ರಿ ಪಕ್ಷದ ಮುಖಂಡರು ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಜರಿದ್ದರು.1
- ಕುರಿಗಾಹಿಗಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ: ಗುಂಡಿನ ದಾಳಿ ಖಂಡನೆ ಹುಣಸೂರು ಸಮೀಪ ಶಿರಾ ತಾಲ್ಲೂಕಿನ ಮೂವರು ಕುರಿಗಾಹಿಗಳ ಮೇಲೆ ಗುಂಡಿನ ದಾಳಿ; ದೌರ್ಜನ್ಯ ತಡೆ ಕಾಯಿದೆ ಪರಿಣಾಮಕಾರಿ ಜಾರಿಗೆ ಒತ್ತಾಯ ಕುರಿಗಾಹಿಗಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ: ಗುಂಡಿನ ದಾಳಿ ಖಂಡನೆ ಹುಣಸೂರು ಸಮೀಪ ಶಿರಾ ತಾಲ್ಲೂಕಿನ ಮೂವರು ಕುರಿಗಾಹಿಗಳ ಮೇಲೆ ಗುಂಡಿನ ದಾಳಿ; ದೌರ್ಜನ್ಯ ತಡೆ ಕಾಯಿದೆ ಪರಿಣಾಮಕಾರಿ ಜಾರಿಗೆ ಒತ್ತಾಯ ತುಮಕೂರು ಕುರಿಗಳನ್ನು ಮೇಯಿಸಲು ವಲಸೆ ತೆರಳುವ ಕುರಿಗಾಹಿಗಳ ಮೇಲೆ ಕಳ್ಳರು ಹಾಗೂ ದುಷ್ಕರ್ಮಿಗಳ ದೌರ್ಜನ್ಯ ಹೆಚ್ಚಾಗುತ್ತಿದ್ದು, ಅವರ ಜೀವ ಮತ್ತು ಆಸ್ತಿಗೆ ರಕ್ಷಣೆ ಇಲ್ಲದಂತಾಗಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಗುರುಪುರ ಸಮೀಪ ನ.5ರ ರಾತ್ರಿ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಮೂವರು ಕುರಿಗಾಹಿಗಳ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಆತಂಕ ಮೂಡಿಸಿದೆ. ಶಿರಾ ತಾಲ್ಲೂಕಿನ ಗೌಡಗೆರೆ ಹೋಬಳಿಯ ಬೇವಿನಹಳ್ಳಿ ಹಾಗೂ ಚಂಗಾವರ ಗ್ರಾಮದ ಕುರಿಗಾಹಿಗಳಾದ ಗೋವಿಂದ, ಜುಂಜಣ್ಣ ಮತ್ತು ಭೀಮು ಅವರು ಎರಡು ದಿನಗಳ ಹಿಂದೆ ಕುರಿಗಳನ್ನು ಮೇಯಿಸಲು ಹುಣಸೂರು ಸಮೀಪಕ್ಕೆ ವಲಸೆ ತೆರಳಿದ್ದರು. ಈ ವೇಳೆ ಕಳ್ಳರು ಎರಡು ಟಗರುಗಳನ್ನು ಕದ್ದು ಪರಾರಿಯಾಗಿದ್ದರು ಎನ್ನಲಾಗಿದೆ. ನ.5ರ ರಾತ್ರಿ ಎರಡು ಬೈಕ್‌ಗಳಲ್ಲಿ ಬಂದ ಕಳ್ಳರು ಮತ್ತೆ ಕುರಿಗಳನ್ನು ಕದಿಯಲು ಯತ್ನಿಸುತ್ತಿರುವುದನ್ನು ಗಮನಿಸಿದ ಕುರಿಗಾಹಿಗಳು ಎಚ್ಚೆತ್ತುಕೊಂಡು ಅವರನ್ನು ಹಿಡಿಯಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿ, ಒಂದು ಬೈಕ್ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ದಾಳಿಯಲ್ಲಿ ಮೂವರು ಕುರಿಗಾಹಿಗಳು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರ್ಕಾರದಿಂದ ರಕ್ಷಣೆ ಒದಗಿಸಲು ಒತ್ತಾಯ ಶಿರಾ, ಹಿರಿಯೂರು ಹಾಗೂ ಚಿಕ್ಕನಾಯಕನಹಳ್ಳಿ ಸೇರಿದಂತೆ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಹಲವು ಭಾಗಗಳಲ್ಲಿ ಮಳೆ-ಬೆಳೆ ಇಲ್ಲದೆ ಕುರಿಗಾಹಿಗಳು ಜೀವನ ನಿರ್ವಹಣೆಗಾಗಿ ಕುರಿಗಳೊಂದಿಗೆ ದೂರದ ಊರುಗಳಿಗೆ ವಲಸೆ ಹೋಗುತ್ತಿದ್ದಾರೆ. ಆದರೆ, ವಲಸೆ ಹೋದ ಸಂದರ್ಭಗಳಲ್ಲಿ ಕುರಿಗಳ ಕಳ್ಳತನ, ಕುರಿಗಾಹಿಗಳ ಮೇಲೆ ಹಲ್ಲೆ ಹಾಗೂ ಗುಂಡಿನ ದಾಳಿಯಂತಹ ಘಟನೆಗಳು ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಕುರಿಗಾಹಿಗಳು ಜೀವಭಯದಲ್ಲೇ ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಕುರಿಗಾಹಿಗಳ ರಕ್ಷಣೆಗಾಗಿ ರೂಪಿಸಿರುವ ಕಳ್ಳತನ ತಡೆ ಕ್ರಮಗಳು, ದೌರ್ಜನ್ಯ ತಡೆ ಕಾಯಿದೆ ಹಾಗೂ ವಿವಿಧ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ವಲಸೆ ಹೋಗುವ ಕುರಿಗಾಹಿಗಳಿಗೆ ಸೂಕ್ತ ಭದ್ರತೆ ಒದಗಿಸುವ ಜತೆಗೆ, ದಾಳಿಯಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಡುಗೊಲ್ಲ ಯುವ ಸೇನೆ ಅಧ್ಯಕ್ಷ ಮಂಜು ಕೆಂಪರಾಯನಹಟ್ಟಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ವರದಿ ಸತೀಶ್ ಎಸ್ ತುಮಕೂರು4
- KR ಪುರಂ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಸಂದರ್ಭದಲ್ಲಿ ಗಲಾಟೆ KR ಪುರಂ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಸಂದರ್ಭದಲ್ಲಿ ಗಲಾಟೆ ಟಿನ್ ಪ್ಯಾಕ್ಟರಿ ಬಳಿ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದ ಸಚಿವ ಕೃಷ್ಣ ಬೈರೇಗೌಡ MLC ನಾರಾಯಣಸ್ವಾಮಿ ಹಾಗೂ ಶಾಸಕ ಬೈರತಿ ಬಸವರಾಜು ರನ್ನ ಸಮಾಧಾನ ಪಡಿಸಿದ ಸಚಿವ ಕೃಷ್ಣ ಬೈರೇಗೌಡ ಅವರೂ ಮಾಡಿದ್ದು ತಪ್ಪು ನಿಮ್ಮವರು ಮಾಡಿದ್ದು ತಪ್ಪು ಆಯ್ತು ಇದನ್ನ ಇಲ್ಲಿಗೆ ಬಿಟ್ಟಾಕಿ ಅಭಿವೃದ್ಧಿ ಕೆಲಸದ ಕಡೆ ಗಮನ ಕೊಡಿ ಅಂತ ಇಬ್ಬರನ್ನ ಸಮಾದಾನ ಪಡಿಸಿದ ಸಚಿವ ಕೃಷ್ಣ ಬೈರೇಗೌಡ1
- ರಾಮನಗರದ ಲಕ್ಷ್ಮಿ ವೆಂಕಟೇಶ್ವರ ದೇವಾಲಯದ ನವಗ್ರಹ ಧ್ವಂಸ ಪ್ರಕರಣ ಖಂಡಿಸಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ. ರಾಮನಗರ: ಹಿಂದೂಧರ್ಮ ತ್ಯಾಗದ ಪ್ರತೀಕ, ಆದರೆ ಧರ್ಮವಿರೋಧಿಗಳಿಂದ ಧಕ್ಕೆ ಎದುರಾದಾಗ ಹಿಂದೂ ಸಮಾಜ ಸುಮ್ಮನಿರುವುದಿಲ್ಲ ಎಂದು ಅನ್ನದಾನೇಶ್ವರಶ್ರೀ ಎಚ್ಚರಿಕೆ ನೀಡಿದರು. ರಾಮನಗರದ ಕೆಂಪೇಗೌಡ ವೃತ್ತದಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಮುಂಭಾಗ, ನವಗ್ರಹ ಮೂರ್ತಿಗಳನ್ನು ಭಗ್ನಗೊಳಿಸಿರುವ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಜಾಗೃತಿ ಸಭೆ, ಪ್ರತಿಭಟನಾ ಮೆರವಣಿಗೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಲ್ಲ ಧರ್ಮಗಳ ಸಾರವೂ ಒಂದೇ, ಅದನ್ನು ಅರಿಯದ ಕಿಡಿಗೇಡಿಗಳು ಹಿಂದೂ ಧರ್ಮದ ಅವಹೇಳನ, ದೇವಾಲಯಗಳ ಮೇಲಿನ ದಾಳಿಯಂತಹ ದುಷ್ಕೃತ್ಯ ಎಸಗುತ್ತಿದ್ದಾರೆ, ಪ್ರತಿ ಬಾರಿ ಇಂತಹ ಘಟನೆಗಳು ನಡೆದಾಗ ತಕ್ಕ ಶಿಕ್ಷೆ ಆದರೆ ಇವು ಮರುಕಳಿಸುವುದಿಲ್ಲ, ಇದು ಆಗದಿರುವ ಕಾರಣ ಪದೇ ಪದೇ ಘಟನೆಗಳು ನಡೆಯುತ್ತಿವೆ, ಘಟನೆಗೆ ಕಾರಣರಾದವರ ಕೈ ಕಾಲು ಮುರಿದರೆ ಎಲ್ಲವೂ ಸರಿಹೋಗುತ್ತದೆ ಎಂದು ಅಕ್ರೋಶ ವ್ಯಕ್ತಪಡಿಸಿದರು. ರಾಮನಗರದಲ್ಲಿ ಈ ಹಿಂದೆಯೂ ದೇವಾಲಯಗಳ ಮೇಲೆ ದಾಳಿ ನಡೆದಿದೆ, ಪ್ರತಿ ಬಾರಿ ಘಟನೆ ನಡೆದಾಗ ಹಿಂದೂ ಸಮಾಜವನ್ನು ಯಾವುದೋ ನೆಪವೊಡ್ಡಿ ಸುಮ್ಮನಾಗಿಸಲಾಗುತ್ತಿದೆ, ಹಾಗಾಗಿಯೇ ಇದು ಮರುಕಳಿಸುತ್ತಿದೆ, ಇದು ಖಂಡನೀಯ ವಿಚಾರ, ಪ್ರತಿಯೊಬ್ಬ ಹಿಂದೂಗಳು ಇದನ್ನು ಖಂಡಿಸಿ, ಕ್ರಮಕ್ಕಾಗಿ ಹೋರಾಟ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು. ಸಾಮಾಜಿಕ ಹೋರಾಟಗಾರ ಚಂದ್ರಶೇಖರ್ ಮಾತನಾಡಿ, ಹಿಂದೂ ಸಮಾಜಡಾ ನಿರ್ಲಕ್ಷ್ಯ ಮನೋಭಾವದ ಪ್ರತಿಫಲ ಇದು, ಅವರು ನಾವು ಸುಮ್ಮನಿರುತ್ತೇವೆ, ನಿಷ್ಕ್ರಿಯರು ಎಂದು ಆಗಾಗ ತಮ್ಮ ಕೈಚಳಕ ತೋರುತ್ತಾರೆ, ಈ ಹಿಂದೆ ಅರ್ಕೇಶ್ವರ ದೇವಾಲಯದಲ್ಲಿ ಹಾನಿ ಮಾಡಿದ್ದರು, ಬಹಳ ಹಿಂದೆ ಚಾಮುಂಡೇಶ್ವರಿ ಕರಗ, ಬನ್ನಿ ಮಹಾಕಾಳಿ ಅಮ್ಮನವರ ಕರಗದ ಮೇಲೆ ಚಪ್ಪಲಿ ತೂರಿದರು, ಈಗ ನವಗ್ರಹ ವಿಗ್ರಹಗಳನ್ನು ಧ್ವಂಸ ಮಾಡಿದ್ದಾರೆ, ಇದು ಹೀಗೆಯೇ ಮುಂದುವರೆಯಬೇಕೆ? ನಾವು ಕೈಲಾಗದವರು ಎಂಬುದನ್ನು ತೋರಿಸಬೇಕು ಎಂದಾದರೆ ಏನು ಮಾಡದೆ ಸುಮ್ಮನಿರಬೇಕು, ಇದು ಇಂದಿಗೇ ಕೊನೆಯಾಗಲಿ, ಎಲ್ಲರೂ ಜಾಗೃತರಾಗಿ ಧರ್ಮದ ರಕ್ಷಣೆಗೆ ನಿಂತರೆ ಇಂತಹ ಕೃತ್ಯ ಎಸಗುವ ಧರ್ಮಾಂದರು ಕಾಲು ಕೇಳುತ್ತಾರೆ, ಇನ್ನಾದರೂ ಧರ್ಮದ ರಕ್ಷಣೆಗೆ ಎಲ್ಲರೂ ಕಂಕಣ ತೊಡಬೇಕು ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ. ಎ. ಮಂಜುನಾಥ್, ಕೆಎಸ್ಐಸಿ ಮಾಜಿ ಅಧ್ಯಕ್ಷ ಗೌತಮ್ ಗೌಡ, ಹಿಂದೂ ಹಿತರಕ್ಷಣಾ ಸಮಿತಿ ಸಂಚಾಲಕ ಡಿ.ಗಿರಿಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್ ಎಲ್. ಆನಂದಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಎಚ್.ಸಿ.ಜಯಮುತ್ತು ಸೇರಿದಂತೆ ಮೈತ್ರಿ ಪಕ್ಷದ ಮುಖಂಡರು ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಜರಿದ್ದರು.1