ಮಹಿಳಾ ಮೀಸಲಾತಿಯನ್ನು ವಿರೋಧಿಸುವವರು ಭಾರಿ ಬೆಲೆ ತೆರಬೇಕಾಗುತ್ತದೆ ಮತ್ತು ದೇಶದ ಜಾಗೃತ ಮಹಿಳೆಯರು ಈ ನಡೆಯನ್ನು ಎಂದಿಗೂ ಕ್ಷಮಿಸದಂತಾಗಿದೆ : ಡಾ. ಶೋಭಾ ನಿಸ್ಸೀಮಗೌಡ್ರ ಶಿಗ್ಗಾವಿ : ನಾರಿಶಕ್ತಿ ವಂದನಾ ಅಧಿನಿಯಮವನ್ನು ಜಾರಿಯಾಗದಂತೆ ತಡೆದ ಮಹಿಳಾ ವಿರೋಧಿ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ವಿರುದ್ಧ ಜನಾಕ್ರೋಶ ಮಹಿಳಾ ಸಭೆ ನಾರಿಶಕ್ತಿ ಫೋರಮ್ ವತಿಯಿಂದ ಶಿಗ್ಗಾವಿ ಪಟ್ಟಣದ ಚನ್ನಮ್ಮ ಸರ್ಕಲ್‌ನಲ್ಲಿ ಮಂಗಳವಾರ ಪ್ರತಿಭಟನೆ ಹಮ್ಮಿಕೊಳ್ಳಲಾಯಿತ್ತು. ಜನಾಕ್ರೋಶ ಮಹಿಳಾ ಸಭೆಯನ್ನು ಉದ್ದೇಶಿಸಿ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ. ಶೋಭಾ ನಿಸ್ಸಿಮಗೌಡ್ರ ಮಾತನಾಡಿ, ದಶಕಗಳಿಂದ ಬಾಕಿ ಉಳಿದಿದ್ದ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದರೂ, ವಿಪಕ್ಷಗಳು ಕೇವಲ ರಾಜಕೀಯ ಕಾರಣಗಳಿಗಾಗಿ ಈ ಮಸೂದೆಯನ್ನು ಅಡ್ಡಗಾಲು ಹಾಕಿವೆ, ಪ್ರಜಾಪ್ರಭುತ್ವಕ್ಕೆ ಅಪಮಾನವೆಂಬAತೆ ಮಹಿಳೆಯರಿಗೆ ಸಂಸತ್ ಮತ್ತು ವಿಧಾನಸಭೆಗಳಲ್ಲಿ ೩೩% ಮೀಸಲಾತಿ ನೀಡುವುದನ್ನು ವಿರೋಧಿಸುವ ಮೂಲಕ, ದೇಶದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳಾ ಶಕ್ತಿಯನ್ನು ಕಡೆಗಣಿಸಲಾಗಿದೆ, ವೋಟ್ ಬ್ಯಾಂಕ್ ರಾಜಕೀಯಕ್ಕೆ ಮಸೂದೆಯ ಜಾರಿಯನ್ನು ಮುಂದೂಡಲು ಡಿಲಿಮಿಟೇಶನ್ (ಕ್ಷೇತ್ರ ಪುನರ್ವಿಂಗಡಣೆ) ನೆಪ ಹೇಳಿ, ವಿಪಕ್ಷಗಳು ಮಹಿಳೆಯರನ್ನು ಕೇವಲ 'ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿವೆ ಎಂಬ ಆಕ್ರೋಶ ವ್ಯಕ್ತವಾಗಿದೆ, ಮಹಿಳಾ ಮೀಸಲಾತಿಯನ್ನು ವಿರೋಧಿಸುವವರು ಭಾರಿ ಬೆಲೆ ತೆರಬೇಕಾಗುತ್ತದೆ ಮತ್ತು ದೇಶದ ಜಾಗೃತ ಮಹಿಳೆಯರು ಈ ನಡೆಯನ್ನು ಕ್ಷಮಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಎಚ್ಚರಿಸಿದ್ದಾರೆ ಎಂದರು. ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ ಹರವಿ, ಮಹಿಳಾ ಮುಖಂಡರಾದ ಇಂದಿರಾ ಪುಟ್ಟನಗೌಡ್ರು, ರೂಪ ಬನ್ನಿಕೊಪ್ಪ, ರತ್ನಕ್ಕ ಅರಗೋಳ, ಯಶೋದಾ ಪಾಟೀಲ್, ಲಕ್ಷ್ಮೀ ತೋಟದ ಹಾಗೂ ಸವಣೂರ ಮತ್ತು ಶಿಗ್ಗಾವಿ ಮಹಿಳಾ ಮೋರ್ಚಾ ಅಧ್ಯಕ್ಷರು ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಮಂಡಲ ಪದಾಧಿಕಾರಿಗಳು, ಸಾರ್ವಜನಿಕರು, ಕಾರ್ಯಕರ್ತರು ಭಾಗವಹಿಸಿದ್ದರು.
ಮಹಿಳಾ ಮೀಸಲಾತಿಯನ್ನು ವಿರೋಧಿಸುವವರು ಭಾರಿ ಬೆಲೆ ತೆರಬೇಕಾಗುತ್ತದೆ ಮತ್ತು ದೇಶದ ಜಾಗೃತ ಮಹಿಳೆಯರು ಈ ನಡೆಯನ್ನು ಎಂದಿಗೂ ಕ್ಷಮಿಸದಂತಾಗಿದೆ : ಡಾ. ಶೋಭಾ ನಿಸ್ಸೀಮಗೌಡ್ರ ಶಿಗ್ಗಾವಿ : ನಾರಿಶಕ್ತಿ ವಂದನಾ ಅಧಿನಿಯಮವನ್ನು ಜಾರಿಯಾಗದಂತೆ ತಡೆದ ಮಹಿಳಾ ವಿರೋಧಿ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ವಿರುದ್ಧ ಜನಾಕ್ರೋಶ ಮಹಿಳಾ ಸಭೆ ನಾರಿಶಕ್ತಿ ಫೋರಮ್ ವತಿಯಿಂದ ಶಿಗ್ಗಾವಿ ಪಟ್ಟಣದ ಚನ್ನಮ್ಮ ಸರ್ಕಲ್‌ನಲ್ಲಿ ಮಂಗಳವಾರ ಪ್ರತಿಭಟನೆ ಹಮ್ಮಿಕೊಳ್ಳಲಾಯಿತ್ತು. ಜನಾಕ್ರೋಶ ಮಹಿಳಾ ಸಭೆಯನ್ನು ಉದ್ದೇಶಿಸಿ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ. ಶೋಭಾ ನಿಸ್ಸಿಮಗೌಡ್ರ ಮಾತನಾಡಿ, ದಶಕಗಳಿಂದ ಬಾಕಿ ಉಳಿದಿದ್ದ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದರೂ, ವಿಪಕ್ಷಗಳು ಕೇವಲ ರಾಜಕೀಯ ಕಾರಣಗಳಿಗಾಗಿ ಈ ಮಸೂದೆಯನ್ನು ಅಡ್ಡಗಾಲು ಹಾಕಿವೆ, ಪ್ರಜಾಪ್ರಭುತ್ವಕ್ಕೆ ಅಪಮಾನವೆಂಬAತೆ ಮಹಿಳೆಯರಿಗೆ ಸಂಸತ್ ಮತ್ತು ವಿಧಾನಸಭೆಗಳಲ್ಲಿ ೩೩% ಮೀಸಲಾತಿ ನೀಡುವುದನ್ನು ವಿರೋಧಿಸುವ ಮೂಲಕ, ದೇಶದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳಾ ಶಕ್ತಿಯನ್ನು ಕಡೆಗಣಿಸಲಾಗಿದೆ, ವೋಟ್ ಬ್ಯಾಂಕ್ ರಾಜಕೀಯಕ್ಕೆ ಮಸೂದೆಯ ಜಾರಿಯನ್ನು ಮುಂದೂಡಲು ಡಿಲಿಮಿಟೇಶನ್ (ಕ್ಷೇತ್ರ ಪುನರ್ವಿಂಗಡಣೆ) ನೆಪ ಹೇಳಿ, ವಿಪಕ್ಷಗಳು ಮಹಿಳೆಯರನ್ನು ಕೇವಲ 'ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿವೆ ಎಂಬ ಆಕ್ರೋಶ ವ್ಯಕ್ತವಾಗಿದೆ, ಮಹಿಳಾ ಮೀಸಲಾತಿಯನ್ನು ವಿರೋಧಿಸುವವರು ಭಾರಿ ಬೆಲೆ ತೆರಬೇಕಾಗುತ್ತದೆ ಮತ್ತು ದೇಶದ ಜಾಗೃತ ಮಹಿಳೆಯರು ಈ ನಡೆಯನ್ನು ಕ್ಷಮಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಎಚ್ಚರಿಸಿದ್ದಾರೆ ಎಂದರು. ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ ಹರವಿ, ಮಹಿಳಾ ಮುಖಂಡರಾದ ಇಂದಿರಾ ಪುಟ್ಟನಗೌಡ್ರು, ರೂಪ ಬನ್ನಿಕೊಪ್ಪ, ರತ್ನಕ್ಕ ಅರಗೋಳ, ಯಶೋದಾ ಪಾಟೀಲ್, ಲಕ್ಷ್ಮೀ ತೋಟದ ಹಾಗೂ ಸವಣೂರ ಮತ್ತು ಶಿಗ್ಗಾವಿ ಮಹಿಳಾ ಮೋರ್ಚಾ ಅಧ್ಯಕ್ಷರು ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಮಂಡಲ ಪದಾಧಿಕಾರಿಗಳು, ಸಾರ್ವಜನಿಕರು, ಕಾರ್ಯಕರ್ತರು ಭಾಗವಹಿಸಿದ್ದರು.
- ಶಿಗ್ಗಾವಿ : ಈ ಹಿಂದೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಘೋಷಿಸಿದ ಮೀಸಲಾತಿಯನ್ನು ಪುನಹ ಪರಿಶಿಷ್ಟ ಜಾತಿಗೆ ಜಾರಿ ಮಾಡಿ ಸುಗ್ರೀವಾಜ್ಞೆಯನ್ನು ಹೊರಡಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶಿಗ್ಗಾವಿ ತಾಲೂಕಾ ಪರಿಶಿಷ್ಠ ಜಾತಿಯ ವಿವಿಧ ಮುಖಂಡರಿAದ ಮನವಿ ಅರ್ಪಿಸಿ ಒತ್ತಾಯಿಲಾಯಿತು. ಇತ್ತೀಚೆಗೆ ಕರ್ನಾಟಕ ಸರ್ಕಾರವು ಒಳ ಮೀಸಲಾತಿಯನ್ನು ಜಾರಿಗೊಳಿಸಲು ಅಂತಿಮ ನಿರ್ಧಾರ ತೆಗೆದುಕೊಂಡಿದ್ದು ಇದು ಈ ಹಿಂದೆ ೨೦೨೨ ರಲ್ಲಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರದಲ್ಲಿ ಪರಿಶಿಷ್ಟ ಜಾತಿಗಳಿಗೆ ಶೇಕಡ ೧೭ರಷ್ಟು ಮೀಸಲಾತಿಯನ್ನ ಘೋಷಿಸಿ ಅದರಲ್ಲಿ ಒಳ ಮೀಸಲಾತಿಗಾಗಿ ಅನುಕೂಲ ಮಾಡಿಕೊಟ್ಟಿತ್ತು ಆದರೆ ಪ್ರಸ್ತುತ ಸರ್ಕಾರವು ೧೭% ಘೋಷಣೆ ಮಾಡಿದಂತ ಮೀಸಲಾತಿಯನ್ನು ಶೇಕಡ ೧೫% ಗೆ ಇಳಿಸಿ ಅದರಲ್ಲಿಯೇ ಅವೈಜ್ಞಾನಿಕವಾಗಿ ಒಳ ಮೀಸಲಾತಿಯನ್ನು ಜಾರಿಗೊಳಿಸುತ್ತಿದೆ ಇದರಿಂದಾಗಿ ಶೇಕಡ ಎರಡರನ್ನು ಮೀಸಲಾತಿ ಪ್ರಮಾಣವೂ ಕಡಿಮೆಯಾಗಿದ್ದರಿಂದ ಬಹಳಷ್ಟು ಅನ್ಯಾಯವಾಗುತ್ತಿದ್ದು ಪ್ರಸ್ತುತ ಕರ್ನಾಟಕವು ಒಬಿಸಿಗಳಿಗೆ ೩೨%, ಎಸ್‌ಸಿ ಗಳಿಗೆ ೧೫% ಮತ್ತು ಎಸ್‌ಟಿ ಗಳಿಗೆ ೩% ಒಟ್ಟು ೫೦% ಮೀಸಲಾತಿಯನ್ನು ಒದಗಿಸುತ್ತದೆ. ಎಸ್‌ಸಿ/ಎಸ್‌ಟಿ ಕೋಟಾವನ್ನು ಹೆಚ್ಚಿಸಲು ಕರ್ನಾಟಕಕ್ಕೆ ಇರುವ ಏಕೈಕ ಮಾರ್ಗವೆಂದರೆ ಸಂವಿಧಾನದ ಶೆಡ್ಯೂಲ್ ೯ ರ ಅಡಿಯಲ್ಲಿ ಲಭ್ಯವಿರುವ ನಿಬಂಧನೆಗಳನ್ನು ಬಳಸಿಕೊಂಡು ಮೀಸಲಾತಿಯನ್ನು ಹೆಚ್ಚಿಸುವುದು. ಶೆಡ್ಯೂಲ್ ೯ ನ್ಯಾಯಾಂಗ ಪರಿಶೀಲನೆಯಿಂದ ರಕ್ಷಿಸಲ್ಪಟ್ಟಿರುವ ಕೇಂದ್ರ ಮತ್ತು ರಾಜ್ಯ ಕಾನೂನುಗಳ ಪಟ್ಟಿಯನ್ನು ಒಳಗೊಂಡಿದೆ. ಶೆಡ್ಯೂಲ್ ೯ ರ ವ್ಯಾಪ್ತಿಯಲ್ಲಿರುವ ಹೆಚ್ಚಿನ ಕಾನೂನುಗಳು ಕೃಷಿ ಅಥವಾ ಭೂಮಿಗೆ ಸಂಬAಧಿಸಿದ್ದರೂ ಸಹ, ಮೀಸಲಾತಿಯಂತಹ ಇತರ ವಿಷಯಗಳು ಪಟ್ಟಿಯಲ್ಲಿವೆ. ಆದ್ದರಿಂದ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರದಲ್ಲಿ ಘೋಷಿಸಿದಂತಹ ಶೇಕಡ ೧೭ರ ಮೀಸಲಾತಿಯನ್ನೇ ಪುನಹ ಜಾರಿಗೊಳಿಸಿ ಒಳ ಮೀಸಲಾತಿಯನ್ನು ಜಾರಿಗೊಳಿಸಲು ಈ ಮೂಲಕ ಒತ್ತಾಯಿಸುತ್ತೇವೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರಾದ ಡಿ ಎಸ್ ಮಾಳಗಿ, ಮಂಜುನಾಥ ಬ್ಯಾಹಟ್ಟಿ, ಕರೆಪ್ಪ ಕಟ್ಟಿಮನಿ, ನೀಲವ್ವ ಕಾಲವಾಡ, ಅಶೋಕ ಕಾಳೆ, ರಾಮಚಂದ್ರ ಧಾರವಾಡ, ಮಲ್ಲೇಶಪ್ಪ ಧಾರವಾಡ, ಲಕ್ಷ್ಮಣ ಬ್ಯಾಹಟ್ಟಿ, ಬಿ ಎಫ್ ಕಟ್ಟಿಮನಿ, ದುರ್ಗಪ್ಪ ಪೂಜಾರ, ಚಂದ್ರಶೇಖರ ಡೊಳ್ಳೆಶ್ವರ, ಮಾಲತೇಶ ಮಾಕಾಪುರ, ಆನಂದ ಬಂಡಿವಡ್ಡರ, ಸಂತೋಷ ಕಟ್ಟಿಮನಿ ಸೇರಿದಂತೆ ಇತರ ಮುಖಂಡರು ಇದ್ದರು.1
- ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಕರ ದೂರಿನ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹಣ ಪಡೆದಿರುವ ಆರೋಪ ಹಿನ್ನೆಲೆಯಲ್ಲಿ ಮೂವರ ಪೊಲೀಸ್ ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು. ಪೊಲೀಸರು ಹಣಕ್ಕಾಗಿ ಬೇಡಿಕೆ ಇಟ್ಟಿರುವ ಕುರಿತು ಸಂಪೂರ್ಣ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.1
- Post by ಗದಗ್ ಜಿಲ್ಲಾ ಸ್ನೇಕ್ ರಹ್ಮನ್ 80957823861
- Post by Karibasava Balal1
- ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಮಾಜಿ ಸಚಿವ ಬಿ ಶ್ರೀರಾಮುಲು ಹೇಳಿಕೆ, ಕಾಂಗ್ರೆಸ್ ಪಕ್ಷದಲ್ಲಿ ದಿನದಿಂದ ದಿನಕ್ಕೆ ಬಿನ್ನಮತಗಳು ಹೆಚ್ಚಾಗುತ್ತಿವೆ. ಸಿಎಂ ಸಿದ್ದರಾಮಯ್ಯ ಅವರು ಖುರ್ಚಿ ಗಟ್ಟಿ ಮಾಡಿಕೊಳ್ಳೊಕೆ ಅಹಿಂದ ನಾಯಕ ಅಂತ ಹೇಳುತ್ತಾರೆ,ದೆಹಲಿಗೆ ಹೋಗಿ ಅಹಿಂದ ಸಮಾವೇಶ ಮಾಡುತ್ತೆವೆ ಅಂತಾರೆ. ಯಾವ ಪುರುಷಾರ್ಥಕ್ಕೆ ಅಹಿಂದ ಸಮಾವೇಶ ಮಾಡುತ್ತಾರೆ, ಸಿದ್ದರಾಮಯ್ಯ ಅವರ ಖುರ್ಚಿಗೆ ಯಾವಾಗ ಕಂಟಕ ಬರುತ್ತೊ ಆಗ ಅಹಿಂದ ಸಮಾವೇಶ ನೆನಪಾಗುತ್ತೆ, ಸಿಎಂ ಸಿದ್ದರಾಮಯ್ಯ ಏಕ ದಿನ್‌ಕಾ, ದೋ ದಿನ್‌ಕಾ ಸಿಎಂ ಆಗಿದ್ದಾರೆ. ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗಿ ಅಹಿಂದ ಸಮಾವೇಶ ಮಾಡುತ್ತೆವೆ ಅಂತಾ ಕುಳಿತುಕೊಳ್ಳುತ್ತಾರೆ, ರಾಜ್ಯದಲ್ಲಿ ಬಿಸಿಲಿನ ತಾಪಮಾನಕ್ಕೆ ಜನ ನೀರಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.1
- ಶಿವಮೊಗ್ಗ: ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳ ವಿರುದ್ದ ಎನ್‌ಎಸ್‌ಯುಐ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆದು ಕೊಂಡಿತು. ಕುಲಪತಿಗಳ ಕಚೇರಿ ಆವರಣದಲ್ಲಿದ್ದ ಕುರ್ಚಿ, ಪ್ಲಾಟ್,ನಾಮಫಲಕ ಎಲ್ಲವನ್ನು ಪ್ರತಿಭಟನಾ ನಿರತ ವಿದ್ಯಾರ್ಥಿ ಗಳು ಪುಡಿ ಪುಡಿ ಮಾಡಿದ್ದಾರೆ. ವಿಶ್ವವಿದ್ಯಾಲಯದಲ್ಲಿ ನಿರಂತರವಾಗಿ ನಡೆಯುತ್ತಿರುವ ವಿದ್ಯಾರ್ಥಿ ವಿರೋಧಿ ಧೋರಣೆ ಹಾಗೂ ಆಡಳಿತಾತ್ಮಕ ವೈಫಲ್ಯ ಗಳನ್ನು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಖಂಡಿಸಿದರು. ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸದ ವಿಸಿಗೆ ಧಿಕ್ಕಾರ ಕೂಗಿ, ಕಚೇರಿಯ ಬೋರ್ಡ್‌ಗೆ ಕಪ್ಪು ಮಸಿ ಬಳಿದರು.ಅಷ್ಟಕ್ಕೆ ಸುಮ್ಮನಾಗದ ವಿದ್ಯಾರ್ಥಿಗಳು ಕುಲಪತಿಗಳ ಕಚೇರಿಯನ್ನು ವಿದ್ಯಾರ್ಥಿಗಳು ಅಕ್ಷರಶಃ ಧ್ವಂಸಗೊಳಿಸಿದರು.ವಿಶ್ವವಿದ್ಯಾಲಯದ ಆಂತರಿಕ ಕಲಹದಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ಕಳೆದ ಐದು ತಿಂಗಳ ಹಿಂದೆ ನಡೆದ 1-3 ಮತ್ತು 5 ನೇ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಿಲ್ಲ ಮತ್ತು ಕಳೆದ ಮೂರು ವರ್ಷಗಳಿಂದ ಪದವಿ ಅಂಕಪಟ್ಟಿ ಗಳನ್ನು ವಿತರಿಸದಿರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ. ಅಂಕಪಟ್ಟಿ ಇಲ್ಲದೆ ಪದವೀಧರರು ಉನ್ನತ ವ್ಯಾಸಂಗಕ್ಕೆ ಹಾಗೂ ಉದ್ಯೋಗಕ್ಕೆ ಸೇರಲು ಪರದಾಡುವಂತಾ ಗಿದೆ. ಈ ಬಗ್ಗೆ ಹಲವು ಬಾರಿ ಕುಲಪತಿಗಳಿಗೆ ಮನವಿ ಮಾಡಿದರೂ ಸ್ಪಂದಿಸದೆ, ಕೇವಲ ಅಧಿಕಾರಿಗಳ ಆಂತರಿಕ ಕಚ್ಚಾಟದಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ವಿಶ್ವವಿದ್ಯಾಲಯವು ಏಕಾಏಕಿ ಪರೀಕ್ಷಾ ಶುಲ್ಕ ಹಾಗೂ ಪ್ರವೇಶ ಶುಲ್ಕವನ್ನು ಸಾವಿರಾರು ರೂಪಾಯಿಗಳಷ್ಟು ಹೆಚ್ಚಿಸಿರು ವುದು ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಪಾಲಿಗೆ ಮರಣ ಶಾಸನ ವಾಗಿದೆ. ಇದರ ಜೊತೆಗೆ ಡಿಜಿಟಲ್ ಮೌಲ್ಯಮಾಪನದಲ್ಲಿನ ತಾಂತ್ರಿಕ ಲೋಪ ಗಳಿಂದಾಗಿ ಫಲಿತಾಂಶಗಳಲ್ಲಿ ಗೊಂದಲ ಏರ್ಪಟ್ಟಿದ್ದು, ಪಾಸ್ ಆದವರು ಫೇಲ್ ಎಂದು ತೋರಿಸುತ್ತಿರುವುದು ವಿದ್ಯಾರ್ಥಿಗಳ ನಿದ್ದೆಗೆಡಿಸಿದೆ. ಈ ಅವ್ಯವಸ್ಥೆ ಸರಿಪಡಿಸಲು ವಿಫಲರಾಗಿರುವ ಕುಲಪತಿಗಳನ್ನು ಕೂಡಲೇ ವಜಾಗೊಳಿಸ ಬೇಕೆಂದು ಆಗ್ರಹಿಸಿದರು. ಕುಲಪತಿ ಹಾಗೂ ರಿಜಿಸ್ಟ್ರಾರ್ ಅವರನ್ನು ವಾಪಸ್ ಕರೆಸಿಕೊಳ್ಳಬೇಕು. ಸಮಸ್ಯೆ ಬಗೆಹರಿಸದೇ ಇದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಎನ್‌ಎಸ್‌ಯುಐ ನ ಜಿಲ್ಲಾಧ್ಯಕ್ಷ ವಿಜಯ್ ಕಾರ್ಯಾಧ್ಯಕ್ಷ ರವಿ ಕಟಿಕೆರೆ ನಗರಾಧ್ಯಕ್ಷ ರವಿ, ನಗರ ಉಪಾಧ್ಯಕ್ಷ ಆದಿತ್ಯ, ಸುಭಾನ್, ಪ್ರಧಾನ ಕಾರ್ಯದರ್ಶಿ ಚಂದ್ರೋಜಿ ರಾವ್, ವರುಣ್ ವಿ ಪಂಡಿತ್ ಮೊದಲಾದವರಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಸಿಇಓ-ಎಎಸ್ಪಿ: ಕುವೆಂಪು ವಿವಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡ ಹಿನ್ನಲೆಯಲ್ಲಿ ಘಟನಾ ಸ್ಥಳಕ್ಕೆ ಕುವೆಂಪು ವಿವಿಯ ಕುಲಸಚಿವರು ಆಗಿರುವ ಶಿವಮೊಗ್ಗ ಜಿ.ಪಂ ಸಿಇಓ ಹಾಗೂ ಪ್ರಭಾರ ಜಿಲ್ಲಾಧಿಕಾರಿ ಎನ್.ಹೇಮಂತ್ ಹಾಗೂ ಹೆಚ್ಚುವರಿಗೆ ಜಿಲ್ಲಾ ರಕ್ಷಣಾಧಿಕಾರಿ ಕಾರ್ಯಪ್ಪನವರು ಭೇಟಿ ನೀಡಿದರು. ಪೀಠೋಪಕರಣ ಧ್ವಂಸಗೊಂಡಿದ್ದನ್ನು ವೀಕ್ಷಿಸಿದ ಎನ್.ಹೇಮಂತ್ ಅವರು, ವಿವಿಯ ಸಿಂಡಿಕೇಟ್ ಸಭಾಂಗಣದಲ್ಲಿ ಚರ್ಚೆ ನಡೆಸಿದರು.ಘಟನೆ ಸಂಬಂಧ ಕುಲಪತಿ, ರಿಜಿಸ್ಟ್ರಾರ್ ಅವರಿಂದ ಮಾಹಿತಿ ಪಡೆದುಕೊಂಡರು. ಘಟನಾ ಸ್ಥಳಕ್ಕೆ ಶಿವಮೊಗ್ಗ ಎಎಸ್ಪಿ ಕಾರ್ಯಪ್ಪ ಭೇಟಿ ನೀಡಿ ಘಟನೆ ಸಂಬಂಧ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.ಪ್ರತಿಭಟನಾಕಾರರ ಜೊತೆ ಮಾತನಾಡಿದ ಭದ್ರಾವತಿ ಡಿವೈಎಸ್ಪಿ ಪ್ರಕಾಶ್ ರಾಥೋಡ್, ಪ್ರತಿಭಟನಾನಿರತ ವಿದ್ಯಾರ್ಥಿ ಗಳ ಮನವೊಲಿಸುವಲ್ಲಿ ಯಶಸ್ವಿಯಾದರು. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು. ವಿದ್ಯಾರ್ಥಿಗಳ ಬೇಡಿಕೆಗಳೇನು: 1.ಕಳೆದ 5 ತಿಂಗಳ ಹಿಂದೆ ನಡೆದಿದ್ದ 1-3 ಮತ್ತು 5 ನೇ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಬೇಕು. ಪದವಿ ಪ್ರಮಾಣ ಪತ್ರ, ಅಂಕಪಟ್ಟಿ, ಜೆನ್ಯೂಯೆನ್ ಸರ್ಟಿಫಿಕೇಟ್ ವಿತರಣೆ ಮಾಡಬೇಕು. 2.ಏಕಾ ಏಕಿ ಏರಿಸಿರುವ ಸಾವಿರಾರು ರುಪಾಯಿ ಪರೀಕ್ಷಾ ಶುಲ್ಕ ಹಾಗು ಪ್ರವೇಶ ಶುಲ್ಕವನ್ನು ಇಳಿಸಬೇಕು. 3.ಡಿಜಿಟೆಲ್ ಮೌಲ್ಯಮಾಪನದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು ಕೂಡಲೇ ಡಿಜಿಟೆಲ್ ಮೌಲ್ಯಮಾಪನವನ್ನು ಕೈಬಿಡಬೇಕು. 4. ಭ್ರಷ್ಟಾಚಾರದ ಆರೋಪ ಹಾಗು ವಿಶ್ವ ವಿದ್ಯಾಲಯದಲ್ಲಿ ಕಳಂಕ ಹೊತ್ತಿರುವ ಎಲ್ಲಾ ಅಧಿಕಾರಿಗಳನ್ನೂ ತಕ್ಷಣ ವಜಾ ಮಾಡಬೇಕು 5. ಯು.ಯು.ಸಿ.ಎಮ್.ಎಸ್ ನಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು. 6. ವಿವಿ ಯಲ್ಲಿನ ತಾಂತ್ರಿಕ ತೊಂದರೆಗಳಿಗೆ ಸರ್ಕಾರವನ್ನು ದೂರದೆ ಸರಿಪಡಿಸುವ ವ್ಯವಸ್ಥೆ ಮಾಡಬೇಕು. 7.2021-22 ರ ದೂರಶಿಕ್ಷಣ ವಿದ್ಯಾರ್ಥಿಗಳ ಪರೀಕ್ಷೆ ಮತ್ತು ಅಂಕಪಟ್ಟಿ ಹಾಗು ಪಲಿತಾಂಶದ ಬಗ್ಗೆ ಕೂಡಲೆ ಗಮನಹರಿಸಬೇಕು. 8.ವಿವಿ ವ್ಯಾಪ್ತಿಗೊಳಪಡುವ ಎಲ್ಲಾ ಕಾಲೇಜುಗಳಲ್ಲಿ ಹಾಗು ಹಾಸ್ಟೆಲ್‌ಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಸರಿಪಡಿಸಬೇಕು. 9. ವಿವಿಯ ಎಲ್ಲಾ ಕಾಲೇಜುಗಳಿಗೆ ಕಂಪ್ಯೂಟರ್ ಹಾಗೂ ಲ್ಯಾಬ್ ವ್ಯವಸ್ಥೆ ಮಾಡಬೇಕು. 10. ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಕಾಲೇಜುಗಳಲ್ಲಿ ಹೆಚ್ಚುವರಿ ಕೊಠಡಿ ವ್ಯವಸ್ಥೆ ಮಾಡಬೇಕು ಎಂದು ಎಚ್ಚರಿಸಿದರು.1
- ಕೂಡ್ಲಿಗಿ : ಪರಿಹಾರ ನೀಡದ ಸಾರಿ ಗೆ ಇಲಾಖೆಯ ಕೊಪ್ಪಳ ಡಿಪೋ 2 ಬಸ್ ಗಳ ಜಪ್ತಿ3
- ಶಿಗ್ಗಾವಿ : ಮುಂಗಾರು ಪೂರ್ವದಲ್ಲಿ ರಸಗೊಬ್ಬರ ವಿತರಿಸಲು ರೈತರಿಗೆ ಎಫ್.ಐ.ಡಿ ಯನ್ನ ಕಡ್ಡಾಯ ಮಾಡಿರುವುದನ್ನ ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ದ ಇದೇ ಮೇ. 2 ರಂದು ಹೆದ್ದಾರಿ ತಡೆದು ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ರೈತ ಒಕ್ಕೂಟ ಕಬ್ಬು ಬೆಳೆಗಾರರ ಸಂಘದ ತಾಲೂಕಾದ್ಯಕ್ಷ ಬಸಲಿಂಗಪ್ಪ ನರಗುಂದ ತಿಳಿಸಿದ್ದಾರೆ.. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಫ್.ಐ.ಡಿ ಕಡ್ಡಾಯದಿಂದ ರೈತರಿಗೆ ಸರಿಯಾದ ವೇಳೆಗೆ ಗೊಬ್ಬರ ಸಿಗೋದಿಲ್ಲ, ಸರ್ವರ್ ಸಮಸ್ಯೆಯಾಗಿ ವಿಳಂಬವಾಗುವ ಬೀತಿ ರೈತರಿಗೆ ಕಾಡುತ್ತದೆ, ರಸಗೊಬ್ಬರ ಮಾರಾಟಗಾರರೂ ಸಹಿತ ರಾಜ್ಯಾದ್ಯಂತ ಇದನ್ನ ವಿರೋಧಿಸಿದ್ದಾರೆ, ವಿತರಿಸಲು ತಾಂತ್ರಿಕ ದೋಷ ಸಂಬವವಿದೆ ಆದ್ದರಿಂದ ಮೊದಲು ಆಧಾರ್ ಕಾರ್ಡ್ ಮೂಲಕ ವಿತರಿಸುತ್ತಿದ್ದಂತೆಯೇ ಗೊಬ್ಬರವನ್ನ ವಿತರಿಸಬೇಕು ಎಂದು ಅಗ್ರಹಿಸಿದರು, ಒಂದು ವೇಳೆ ಎಫ್.ಐ.ಡಿ ಕಡ್ಡಾಯವನ್ನ ನಿಲ್ಲಿಸದೇ ಹೋದರೆ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದರು. ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಕಾರ್ಯಾದ್ಯಕ್ಷ ಮಂಜುನಾಥ ಕಂಕಣವಾಡ ಮಾತನಾಡಿ, ರಸಗೊಬ್ಬರ ಕಂಪನಿಗಳು ಉತ್ಪಾದಿಸಿರುವ ಗೊಬ್ಬರ ಲಿಂಕ್ ಮೂಲಕ ರೈತರಿಗೆ ನೀಡುತ್ತಿರುವುದರಿಂದ ರೈತರಿಗೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ ಇದನ್ನ ಕೂಡಲೇ ಸರಕಾರ ರಸಗೊಬ್ಬರ ಕಂಪನಿಗಳಿಗೆ ಕಡಿವಾಣ ಹಾಕಬೇಕು, ಎಫ್.ಐ.ಡಿ ಕಡ್ಡಾಯ ಕಾನೂನು ಅವೈಜ್ಞಾನಿಕವಾಗಿರುವುದರಿಂದ ರೈತರಿಗೆ ಇದು ಮಾರಕವಾಗಲಿದ್ದು ಕೂಡಲೇ ಸರಕಾರಗಳು ಎಚ್ಚೆತ್ತುಕೊಳ್ಳಬೇಕು ಇಲ್ಲವಾದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದರು. ವಿವಿಧ ರೈತ ಸಂಘಗಳ ಮುಖಂಡರಾದ ನಾಗರಾಜ ದೇಸಾಯಿ, ಗಿರಿಧರಗೌಡ ಪಾಟೀಲ, ಲಕ್ಷ್ಮಣ ಹಂಚಿನಮನಿ, ರಮೇಶ ಜೋಳದ, ನಿಂಗಪ್ಪ ಓಲೇಕಾರ, ಸೇರಿದಂತೆ ರೈತ ಮುಖಂಡರು ಇದ್ದರು.1