Shuru
Apke Nagar Ki App…
ಹುಬ್ಬಳ್ಳಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಭಾರತೀಯರು ಮರೆಯುವುದಿಲ್ಲ: ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಭಾರತೀಯರು ಮರೆಯುವುದಿಲ್ಲ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಭಯೋತ್ಪಾದಕರ ದಾಳಿಯಲ್ಲಿ ಮಡಿದವರಿಗೆ ಶಾಂತಿ ಸಿಗಬೇಕಾದರೆ ಪಾಕಿಸ್ತಾನ ಸರ್ವ ನಾಶ ಆದಾಗ ಮಾತ್ರ ಸಾಧ್ಯ. ಕೇಂದ್ರ ಸರ್ಕಾರ ಭಯೋತ್ಪಾದಕತೆ ಹಾಗೂ ಭಯೋತ್ಪಾದಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದರು.
Manjunath kavali
ಹುಬ್ಬಳ್ಳಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಭಾರತೀಯರು ಮರೆಯುವುದಿಲ್ಲ: ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಭಾರತೀಯರು ಮರೆಯುವುದಿಲ್ಲ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಭಯೋತ್ಪಾದಕರ ದಾಳಿಯಲ್ಲಿ ಮಡಿದವರಿಗೆ ಶಾಂತಿ ಸಿಗಬೇಕಾದರೆ ಪಾಕಿಸ್ತಾನ ಸರ್ವ ನಾಶ ಆದಾಗ ಮಾತ್ರ ಸಾಧ್ಯ. ಕೇಂದ್ರ ಸರ್ಕಾರ ಭಯೋತ್ಪಾದಕತೆ ಹಾಗೂ ಭಯೋತ್ಪಾದಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದರು.
More news from ಕರ್ನಾಟಕ and nearby areas
- ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಭಾರತೀಯರು ಮರೆಯುವುದಿಲ್ಲ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಭಯೋತ್ಪಾದಕರ ದಾಳಿಯಲ್ಲಿ ಮಡಿದವರಿಗೆ ಶಾಂತಿ ಸಿಗಬೇಕಾದರೆ ಪಾಕಿಸ್ತಾನ ಸರ್ವ ನಾಶ ಆದಾಗ ಮಾತ್ರ ಸಾಧ್ಯ. ಕೇಂದ್ರ ಸರ್ಕಾರ ಭಯೋತ್ಪಾದಕತೆ ಹಾಗೂ ಭಯೋತ್ಪಾದಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದರು.1
- ಶಿಗ್ಗಾವಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಶಿಗ್ಗಾವಿ ತಾಲೂಕಿಗೆ ಜಿಲ್ಲೆಗೆ ಪ್ರಥಮ ಸ್ಥಾನ, ಹಾಗೂ ರಾಜ್ಯಕ್ಕೆ ಏಳನೇ ಸ್ಥಾನ ಆಗಮಿಸಿದ್ದು ಶ್ರಮಿಸಿದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಬಿ ಅಂಬಿಗೇರ ಸೇರಿದಂತೆ ಅಧಿಕಾರಿಗಳನ್ನು ಶಿಕ್ಷಕರನ್ನು ಸ್ಥಳೀಯ ಮುಖಂಡರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಅಶೋಕ ಕಾಳೆ, ಬಸವರಾಜ ಜೇಕ್ಕನಕಟ್ಟಿ, ಸುರೇಶ ಹರಿಜನ, ನೌಕರ ಸಂಘದ ಅಧ್ಯಕ್ಷ ಅರುಣ ಹೊಡೆದಗೌಡ್ರ, ನವಲಗುಂದ, ಮಾಂತೇಶ್ ರಾಮಾಪುರ, ಸೇರಿದಂತೆ ಇತರರಿದ್ದರು.1
- BREAKING NEWS: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ರಣಕಣ ಉದ್ವಿಗ್ನ! (ಹಿನ್ನೆಲೆಯಲ್ಲಿ ಗಂಭೀರವಾದ ಮ್ಯೂಸಿಕ್ ಮತ್ತು ಬ್ರೇಕಿಂಗ್ ನ್ಯೂಸ್ ಗ್ರಾಫಿಕ್ಸ್ ಪ್ಲೇ ಆಗುತ್ತಿರುವಂತೆ ಊಹಿಸಿಕೊಳ್ಳಿ) ನ್ಯೂಸ್ ಆಂಕರ್: "ನಮಸ್ಕಾರ, ಇಂದಿನ ಅತಿದೊಡ್ಡ ಸುದ್ದಿಯೊಂದಿಗೆ ನಾನು ನಿಮ್ಮ ಜೊತೆಗಿದ್ದೇನೆ. ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ ಆರಂಭವಾಗುತ್ತಿದ್ದಂತೆಯೇ ಅಕ್ಷರಶಃ ರಣರಂಗ ನಿರ್ಮಾಣವಾಗಿದೆ! ಪ್ರಜಾಪ್ರಭುತ್ವದ ಹಬ್ಬ ನಡೆಯಬೇಕಿದ್ದ ಕಡೆ ಈಗ ರಕ್ತಪಾತ ಮತ್ತು ಹಿಂಸಾಚಾರದ ವಾಸನೆ ಬಡಿಯುತ್ತಿದೆ." 📍 ಪ್ರಮುಖ ಮುಖ್ಯಾಂಶಗಳು: ಅಟ್ಟಾಡಿಸಿ ಹೊಡೆತ: BJP ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋದ ಕಿಡಿಗೇಡಿಗಳು. ಪ್ರಾಣಾಪಾಯದಿಂದ ಪಾರು: ಹೊಲಗಳ ಕಡೆಗೆ ಓಡಿ ಜೀವ ಉಳಿಸಿಕೊಂಡ ಅಭ್ಯರ್ಥಿ. ಪೊಲೀಸರ ಅಸಹಾಯಕತೆ: ಕಣ್ಣೆದುರೇ ದಾಳಿ ನಡೆದರೂ ಹತೋಟಿಗೆ ಬಾರದ ಪರಿಸ್ಥಿತಿ. 🎙️ ವರದಿ: "ಪಶ್ಚಿಮ ಬಂಗಾಳದ ಕುಮಾರ್‌ಗಂಜ್‌ನಲ್ಲಿ ಇಂದು ಮಧ್ಯಾಹ್ನ ಆತಂಕಕಾರಿ ಘಟನೆಯೊಂದು ನಡೆದಿದೆ. ಮತಗಟ್ಟೆಯನ್ನು ಪರಿಶೀಲಿಸಲು ಆಗಮಿಸಿದ್ದ ಬಿಜೆಪಿ ಅಭ್ಯರ್ಥಿ ಸುವೇಂದು ಸರ್ಕಾರ್ ಅವರ ಮೇಲೆ ತೃಣಮೂಲ ಕಾಂಗ್ರೆಸ್ (TMC) ಕಾರ್ಯಕರ್ತರು ಎನ್ನಲಾದ ಗುಂಪು ಏಕಾಏಕಿ ದಾಳಿ ನಡೆಸಿದೆ. ಆರಂಭದಲ್ಲಿ ಸ್ಥಳೀಯರೊಂದಿಗೆ ವಾಗ್ವಾದ ಶುರುವಾಗಿದೆ, ಆದರೆ ನೋಡನೋಡುತ್ತಿದ್ದಂತೆಯೇ ಪರಿಸ್ಥಿತಿ ಕೈಮೀರಿ ಹೋಗಿದೆ. ನೂರಾರು ಜನರು ಸುವೇಂದು ಸರ್ಕಾರ್ ಅವರ ಮೇಲೆರಗಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ ತಡೆಯಲು ಪ್ರಯತ್ನಿಸಿದರೂ ಕಿಡಿಗೇಡಿಗಳು ಮಾತ್ರ ಯಾವುದಕ್ಕೂ ಸೊಪ್ಪು ಹಾಕಲಿಲ್ಲ. ಜೀವ ಉಳಿಸಿಕೊಳ್ಳಲು ಓಟ: ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ, ಅಭ್ಯರ್ಥಿ ಸುವೇಂದು ಸರ್ಕಾರ್ ಅಲ್ಲಿಂದ ತಪ್ಪಿಸಿಕೊಂಡು ಅಕ್ಷರಶಃ ಹೊಲಗಳ ಕಡೆಗೆ ಓಡಿದ್ದಾರೆ. ಅವರ ಹಿಂದೆ ನೂರಾರು ಜನರು ದೊಣ್ಣೆಗಳನ್ನು ಹಿಡಿದು ಬೆನ್ನಟ್ಟುತ್ತಿರುವ ದೃಶ್ಯಗಳು ಈಗ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ." ⚠️ ಸದ್ಯದ ಪರಿಸ್ಥಿತಿ: "ಘಟನೆಯ ಬಳಿಕ ಕುಮಾರ್‌ಗಂಜ್‌ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಹಿಂಸಾಚಾರ ಹೊಸದೇನಲ್ಲದಿದ್ದರೂ, ಅಭ್ಯರ್ಥಿಯೊಬ್ಬರ ಮೇಲೆ ಈ ರೀತಿ ಬಹಿರಂಗವಾಗಿ ದಾಳಿ ನಡೆದಿರುವುದು ಈಗ ತೀವ್ರ ಚರ್ಚೆಗೆ ಕಾರಣವಾಗಿದೆ." "ಇದು ಇಂದಿನ ಬ್ರೇಕಿಂಗ್ ನ್ಯೂಸ್, ಕ್ಷಣ ಕ್ಷಣದ ಮಾಹಿತಿಗಾಗಿ ನೋಡ್ತಾ ಇರಿ ನಮ್ಮ ನ್ಯೂಸ್ ಚಾನೆಲ್."1
- ಬಾಗಲಕೋಟೆ: ಲೋಕಾಯುಕ್ತ ಬಲೆಗೆ ಬಿದ್ದ ಕೆರೂರು ಪಿಎಸ್ಐ ಮತ್ತು ಕಾನ್ಸ್‌ಟೇಬಲ್! ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಸಿ 1.70 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ದಾಳಿ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆ. ಪಿಎಸ್ಐ ಭೀಮಪ್ಪ ರಬಕವಿ ಮತ್ತು ಪೊಲೀಸ್ ಪೇದೆ ಸಂತೋಷ ಬಿರಾದಾರ. ಇಸ್ಪೀಟ್ ಆಟದ ಸುಳ್ಳು ಆರೋಪ ಹೊರಿಸಿ, ಬೈಕ್ ಬಿಡುಗಡೆ ಮಾಡಲು ಹಣಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಗಳು. ಲೋಕಾಯುಕ್ತ ಎಸ್ಪಿ ಎಂ.ಬಿ. ನಂದಗಾಂವಿ ಮಾರ್ಗದರ್ಶನದಲ್ಲಿ ಡಿಎಸ್ಪಿ ಸುರೇಶರೆಡ್ಡಿ ತಂಡದಿಂದ ಭರ್ಜರಿ ಬೇಟೆ. "ಬಾಗಲಕೋಟೆ ಜಿಲ್ಲೆಯಲ್ಲಿ ಭ್ರಷ್ಟ ಪೊಲೀಸ್ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ನೀಡಿದೆ. ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ಪಿಎಸ್ಐ ಭೀಮಪ್ಪ ರಬಕವಿ ಹಾಗೂ ಪೊಲೀಸ್ ಪೇದೆ ಸಂತೋಷ ಬಿರಾದಾರ ಈಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮುತ್ತಪ್ಪ ನಾಯ್ಕರ್ ಎಂಬುವವರ ಸ್ನೇಹಿತನ ಮೇಲೆ ಇಸ್ಪೀಟ್ ಆಟದ ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಸಿದ್ದ ಈ ಅಧಿಕಾರಿಗಳು, ವಶಪಡಿಸಿಕೊಂಡಿದ್ದ ಬೈಕ್ ಬಿಡುಗಡೆ ಮಾಡಲು ಬರೋಬ್ಬರಿ ಒಂದು ಲಕ್ಷದ ಎಪ್ಪತ್ತು ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿ1
- ಎ. 24: ದಿನಾಂಕ: 23-04-2026 ನೇ ಗುರುವಾರ, ಅರಸೀಕೆರೆ ತಾಲ್ಲೂಕು, ಜಾವಗಲ್ ಹೋಬಳಿ, ಉಂಡಿಗನಾಳು ಗ್ರಾಮದಶ್ರೀಯವರ ಶ್ರೀ ರಸಾಸಿದ್ದೇಶ್ವರಸ್ವಾಮಿಯವರ ಬೆಟ್ಟದ ಪ್ರವೇಶ ದ್ವಾರ ಹಾಗೂ ಶ್ರೀ ಲಕ್ಷಣಸ್ವಾಮೀಜಿಯವರ ದಾನ ಮಂದಿರ ಲೋಕಾರ್ಪಣಾ ಸಮಾರಾಂಭ ಶ್ರೀಯವರ ಅಪ್ಪಣೆಮೇರೆಗೆ ತುಂಬಾ ವಿರ್ಜಭಣೆಯಿಂದ ನಡೆಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಜ್ಞಾನಪ್ರಭುಸಿದ್ಧರಾಮ ದೇಶಿಕೇಂದ್ರ ಮಹಾಸ್ವಾಮಿಜೀಯವರು ಸುಕ್ಷೇತ್ರ ಕೆರೆಗೋಡಿ-ರಂಗಾಪುರ, ತಿಪಟೂರು ತಾ. ಶ್ರೀ ಶ್ರೀ ಶ್ರೀ ಜ್ಞಾನಪ್ರಭುಸಿದ್ಧರಾಮ ದೇಶಿಕೇಂದ್ರ ಮಹಾಸ್ವಾಮಿಜೀಯವರು, ಯಳನಡು ಮಹಾಸಂಸ್ಥಾನ, ಶ್ರೀಮಠ ಕಡೂರು. ಶ್ರೀ ಶ್ರೀ ಶ್ರೀ ಡಾ॥ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಮಹಾಸ್ವಾಮಿಜೀಯವರು, ವಿರಕ್ತಮಠ, ಕುಳ್ಳೂರು -ತಮ್ಮಡಿಹಳ್ಳಿ, ಚಿಕ್ಕನಾಯ್ಕಹಳ್ಳಿ ತಾ. ಶ್ರೀ ಶ್ರೀ ಶ್ರೀ ಡಾ॥ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಜೀಯವರು, ಸುಕ್ಷೇತ್ರ ಪುಷ್ಪಗಿರಿ ಮಹಾಸಂಸ್ಥಾನ, ಹಳೇಬೀಡು. ಶ್ರೀ ಶ್ರೀ ಶ್ರೀ ನಿ.ಪ್ರ.ಸ್ವ. ಶಿವಶಂಕರಶಿವಯೋಗಿ ಮಹಾಸ್ವಾಮಿಜೀಯವರು ಕರಡಿಗವಿ ಮಠ, ಸಿಂದಗೆರೆ. ಇವರಗಳ ದಿವ್ಯ ಸಾನಿಧ್ಯದಲ್ಲಿ ನಡೆಯಿತು. ಶ್ರೀ ಜೇನುಕಲ್ ಸಿದ್ದೇಶ್ವರಸ್ವಾಮಿ ಸುಕ್ಷೇತ್ರ ಯಾದಾಪುರ. ಗ್ರಾಮದೇವತೆ ಶ್ರೀ ಕರಿಯಮ್ಮದೇವಿ, ಸುಕ್ಷೇತ್ರ ಉಂಡಿಗನಾಳು. ಶ್ರೀ ಖಂಡಿಬೈರವೇಶ್ವರಸ್ವಾಮಿ, ಕಲ್ಯಾಡಿ. ಶ್ರೀ ಬಸವೇಶ್ವರಸ್ವಾಮಿ, ಹಂದ್ರಾಳು. ಶ್ರೀ ಹೋತನಕಲ್ಲಮ್ಮದೇವಿ, ದೇಶಾಣಿ. ಶ್ರೀ ಆಂಜನೇಯಸ್ವಾಮಿ, ಚಿಕ್ಕಲಿಂಗನಹಳ್ಳಿ. ಶ್ರೀ ರೊಪ್ಪದಮ್ಮ ದೇವಿ ಚಿಕ್ಕಲಿಂಗನಹಳ್ಳಿ (ರೊಪ್ಪ). ಶ್ರೀ ಕಣುವಮ್ಮ ದೇವಿ, ಸಿಂಗಟಗೆರೆ. ದೇವರುಗಳ ಆಗಮನದೊಂದಿಗೆ ಪ್ರವೇಶ ದ್ವಾರ ಉಧ್ಗಾಟನೆನ್ನು ಮಾಡಲಾಯಿತು. ಶ್ರೀ ಲಕ್ಷಣಸ್ವಾಮೀಜಿಯವರ ದಾನ ಮಂದಿರ ಲೋಕಾರ್ಪಣಾ ಮಾಡಲಾಯಿತು. ಎಲ್ಲ ಪೂಜ್ಯರಿಂದ ಸನ್ನಿದಾನಕ್ಕೆ ಬಂದಿರುವ ಭಕ್ತರಿಗೆ ಆರ್ಶಿವನವನಗನು ನೀಡಿದರು. ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಶ್ರೀ ಕೆ.ಎಸ್. ಲಿಂಗೇಶ್, ಮಾಜಿ ಶಾಸಕರು ಬೇಲೂರು ವಿಧಾನಸಭಾ ಕ್ಷೇತ್ರ. ಶ್ರೀ ಬಿ. ಶಿವರಾಂ, ಮಾಜಿ ಸಚಿವರು, ಹಾಸನ. ಶ್ರೀ ರಾಜಶೇಖರ್ ಗ್ರಾನೈಟ್ ರವರು, ಕಾಂಗ್ರೇಸ್ ಮುಖಂಡರು, ಕಾರ್ಯಕ್ರಮದ ಕುರಿತು ಮಾತನಾಡಿದರು. ಶ್ರೀ ಚಟ್ನಳ್ಳಿ ಮಹೇಶ್‌ರವರು, ಸಾಹಿತಿಗಳು ಹಾಗೂ ಚಿಂತಕರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಮಸ್ತ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ" ಆಯೋಜನೆ ಮಾಡಿದರು. ಈ ಕಾರ್ಯಕ್ರಮಕ್ಕೆ ಉಂಡಿಗನಾಳು ಸುತ್ತಮುಲ್ಲಿನ ಗ್ರಾಮದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.2
- ಗದಗ ಜಿಲ್ಲೆ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರೆ ಪ್ರಯುಕ್ತ ಕಲಾ ರಸದೌತಣ - ಅಣ್ಣ ತಂಗಿ ನಾಟಕ ಯಶಸ್ವಿ ನಾಗರಹಳ್ಳಿ ಗ್ರಾಮದಲ್ಲಿ ಈಗ ಹಬ್ಬದ ಸಂಭ್ರಮ. ಗ್ರಾಮದೇವತೆಯ ಜಾತ್ರಾ ಮಹೋತ್ಸವದ ಪ್ರಯುಕ್ತ ಗ್ರಾಮಸ್ಥರು ಹಮ್ಮಿಕೊಂಡಿದ್ದ "ಅಣ್ಣ-ತಂಗಿ" ಎಂಬ ಸಾಮಾಜಿಕ ನಾಟಕವು ಎಲ್ಲಾ ಪಕ್ಷೇದ ರಾಜಕೀಯ ವೆಕ್ತಿ ಗಳ ಸಮ್ಮುಖದಲ್ಲಿ ರಾಮಣ್ಣ ಲಮಾಣಿ ಮಾಜಿ ಶಾಸಕರಿಂದ ಉದ್ಘಾಟನೆ ಗೊಂಡಿತು ಹೇಮಗಿರೀಶ್ ಹಾವಿನಾಳ ಮಾತನಾಡಿ ರಂಗಸ್ಥಳದಲ್ಲಿ ಅರಳಿದ ಒಡಹುಟ್ಟಿದವರ ಪ್ರೇಮ ಒಟ್ಟಿನಲ್ಲಿ ಇದರಲ್ಲಿ ಬರುವ ಸನ್ನಿವೇಶದಲ್ಲಿ ಒಳ್ಳೆಯದನ್ನು ಆಯ್ಕೆ ಮಾಡಿಕೊಂಡು ನಿಮ್ಮ ಜೀವನದಲ್ಲಿ ರೂಪಿಸಿಗೊಳ್ಳಿ ಕೇವಲ ಹಳ್ಳಿಗಳಲ್ಲಿ ಕಲೆ ಉಳಿದಿದೆ ಈಗಿನ AI ಯುಗದಲ್ಲಿ ಎಲ್ಲವನ್ನು ಪಡೆಯಲು ಸಾಧ್ಯ ಆದರೆ ಭೂಮಿ ಯಲ್ಲಿ ಉಳುಮೆ ಮಾಡದೇ ಏನನ್ನು ಪಡೆಯಲು ಸಾಧ್ಯವಿಲ್ಲ ರೈತರಿಗೆ ಒಳ್ಳೆ ಸಮಯ ಬಂದೆ ಬರುತ್ತೆ ಯಂದರು ನಾಗರಹಳ್ಳಿ ಗ್ರಾಮದ ಶ್ರೀ ಗ್ರಾಮದೇವತೆಯ ಜಾತ್ರೆಯೆಂದರೆ ಅದು ಬರೀ ಪೂಜೆ-ಪುನಸ್ಕಾರಗಳಲ್ಲ, ಅದು ಕಲೆ ಮತ್ತು ಸಾಹಿತ್ಯದ ಸಂಗಮವೂ ಹೌದು. ಈ ವರ್ಷದ ಜಾತ್ರಾ ವಿಶೇಷವಾಗಿ ಗ್ರಾಮದ ಯುವಕರು ಮತ್ತು ಹಿರಿಯರು ಸೇರಿ ಪ್ರದರ್ಶಿಸಿದ "ಅಣ್ಣ-ತಂಗಿ" ಎಂಬ ಸಾಮಾಜಿಕ ನಾಟಕವು ಜನಮನ ಗೆದ್ದಿದೆ. ಅಣ್ಣ ಮತ್ತು ತಂಗಿಯ ನಡುವಿನ ಪವಿತ್ರ ಬಾಂಧವ್ಯ, ತ್ಯಾಗ ಮತ್ತು ಸಮಾಜದಲ್ಲಿ ಎದುರಾಗುವ ಸಂಕಷ್ಟಗಳ ಸುತ್ತ ಕಥೆ ಹೆಣೆಯಲಾಗಿತ್ತು. ಸ್ಥಳೀಯ ಕಲಾವಿದರ ನೈಜ ಅಭಿನಯಕ್ಕೆ ಪ್ರೇಕ್ಷಕರು ಮಾರುಹೋದರು. ಅದರಲ್ಲೂ ಅಣ್ಣ ತಂಗಿಯ ಪಾತ್ರಧಾರಿ ಕಣ್ಣೀರು ಹಾಕಿದಾಗ, ನೆರೆದಿದ್ದ ಸಾವಿರಾರು ಪ್ರೇಕ್ಷಕರ ಕಣ್ಣುಗಳೂ ತೇವವಾಗಿದ್ದವು. ನಾಟಕಕ್ಕೆ ಪೂರಕವಾದ ಹಿನ್ನೆಲೆ ಸಂಗೀತ ಮತ್ತು ಹಳೆಯ ಕಾಲದ ಜನಪದ ಶೈಲಿಯ ಹಾಡುಗಳು ನಾಟಕದ ಮೆರುಗನ್ನು ಹೆಚ್ಚಿಸಿದ್ದವು.1
- ಗುಳೇದಗುಡ್ಡ: ರಾಜಋಷಿ ಶ್ರೀಭಗೀರಥ ಮಹರ್ಷಿಗಳ ಜಯಂತ್ಯುತ್ಸವದ ಅಂಗವಾಗಿ ಗುರುವಾರ ಭಗೀರಥ ಮಹರ್ಷಿಗಳ ಭಾವಚಿತ್ರ ಮೆರವಣಿಗೆ ಡೊಳ್ಳು ಮೇಳ, ಕುಂಭ ಮೇಳದ ಮೂಲಕ ನಗರದಲ್ಲಿ ಸಂಭ್ರಮದಿಂದ ನಡೆಯಿತು. ಸಮೀಪದ ಪರ್ವತಿ ಗ್ರಾಮದಿಂದ ಭಾವಚಿತ್ರ ಮೆರವಣಿಗೆ ಪ್ರಾರಂಭಗೊಂಡು ನಗರದ ಹಾದಿಬಸವೇಶ್ವರ ದೇವಸ್ಥಾನ, ಬನ್ನಿಕಟ್ಟಿ, ಸರಾಪ ಬಜಾರ, ಕಂಠಿಪೇಟೆ, ಗಚ್ಚಿನಕಟ್ಟಿ, ಚೌಬಜಾರ, ಅರಳಿಕಟ್ಟಿ, ಪರಸಭೆ, ಭಾರತ ಮಾರ್ಕೆಟ್ ಮೂಲಕ ಹಾಯ್ದು ಗ್ರಾಮಕ್ಕೆ ತಲುಪಿತು. ಬಳಿಕ ಗ್ರಾಮದಲ್ಲಿ ಅನ್ನ ಸಂತರ್ಪಣೆ ನಡೆಯಿತು. ಮೆರವಣಿಗೆಯಲ್ಲಿ ಸಮಾಜದ ಬಾಂಧವರು ಸೇರಿದಂತೆ ಗ್ರಾಮಸ್ಥರು ಇದ್ದರು.1
- ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ 75ನೇ ವಾರ್ಷಿಕ ಘಟಿಕೋತ್ಸವದಲ್ಲಿ ಶಿಕ್ಷಣ ತಜ್ಞ ಪ್ರೊ.ಅಚ್ಯುತ ಸಾಮಂತ, ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ, ಹುಬ್ಬಳ್ಳಿಯ ಮಜೇಥಿಯಾ ಫೌಂಡೇಶನ್ ಸ್ಥಾಪಕ ಜಿತೇಂದ್ರ ಮಜೆಥಿಯಾ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಯಿತು. ಘಟಿಕೋತ್ಸವದಲ್ಲಿ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಇಸ್ರೋದ ನಿಕಟ ಪೂರ್ವ ಅಧ್ಯಕ್ಷರಾದ ಪ್ರೊ. ಎ.ಎಸ್.ಕಿರಣ ಕುಮಾರ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎ.ಎಂ ಖಾನ್ ಸೇರಿದಂತೆ ಇತರರಿದ್ದರು.1