ಕಾಂಗ್ರೆಸ್ ಸರ್ಕಾರದ ಸಾಧನೆಯನ್ನು ಮನೆಮನೆಗೆ ತಲುಪಿಸಿ: ಹೊಸಹಳ್ಳಿಮಧುಸೂದನ್ ವರದಿ: ಹೊಮ್ಮನಂಜುಂಡನಾಯಕ ಕಾಂಗ್ರೆಸ್ ಸರ್ಕಾರದ ಸಾಧನೆಯನ್ನು ಮನೆಮನೆಗೆ ತಲುಪಿಸಿ: ಹೊಸಹಳ್ಳಿಮಧುಸೂದನ್ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಪದಾಧಿಕಾರಿಗಳ ಸಭೆ ಚಾಮರಾಜನಗರ: ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಪದಾಧಿಕಾರಿಗಳು ಗ್ರಾಮಗಳಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಗಳು, ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮನೆಮನೆಗೆ ಮನವರಿಕೆ ಮಾಡಿಕೊಟ್ಟರೆ ಮುಂಬರುವ ಚುನಾವಣೆಗಳಲ್ಲಿ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಹೊಸಹಳ್ಳಿ ಮಧುಸೂದನ್ ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪ್ರಚಾರ ಸಮಿತಿಯ ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಿತಿ ಪದಾಧಿಕಾರಿಗಳು ಬೂತ್ ಮಟ್ಟದಲ್ಲಿ ಕೆಲಸ ಮಾಡಿದರೆ ನಿಮ್ಮ ನಾಯಕತ್ವ. ಬೆಳೆಯುತ್ತದೆ. ಪ್ರಚಾರ ಸಮಿತಿ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ, ಪಕ್ಷದ ಸಂಘಟನೆಯು ಆಗುತ್ತದೆ ಎಂದರು. ಶಾಸಕರ ಅಧ್ಯಕ್ಷತೆಯಲ್ಲಿ ಆಯಾಯ ತಾಲೂಕು ಮಟ್ಟದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಂಡು ಪ್ರಚಾರ ಸಮಿತಿಯ ಪದಾಧಿಕಾರಿಗಳಿಗೆ ಕಾಂಗ್ರೆಸ್‌ನ ಇತಿಹಾಸ, ಸರ್ಕಾರದ ಯೋಜನೆಗಳನ್ನು ಮನವರಿಕೆ ಮಾಡಿಕೊಡಲಾಗುತ್ತದೆ. ನಮ್ಮ ನಾಯಕತ್ವದ ಗುಣಗಳನ್ನು ಹೇಗೆ ರೂಪಿಸಬೇಕು. ಅದನ್ನು ಮನವರಿಕೆ ಮಾಡಿ ಕೊಡಲಾಗುತ್ತದೆ. ಅವರು ಆಗ ತಳಮಟ್ಟದಲ್ಲಿ ಕಾಂಗ್ರೆಸ್ ಕಟ್ಟಲು ಒಂದು ಅವಕಾಶ ಆಗುತ್ತದೆ ಎಂದರು. ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕಲವಾಡಿ ಗುರುಸ್ವಾಮಿ ಮಾತನಾಡಿ ಚಾಮರಾನಗರ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರಕ್ಕೆ ಪಂಚಗ್ಯಾರಂಟಿ ಯೋಜನೆಯಿಂದ 200 ಕೋಟಿ ರೂ. ಸಂದಾಯ ಆಗುತ್ತದೆ. ಇದುವರೆಗೂ 600 ಕೋಟಿ ರೂ. ಸಂದಾಯ ಆಗಿದೆ. 5 ವರ್ಷಗಳಿಗೆ ಒಂದು ಸಾವಿರ ಕೋಟಿಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಆಗಿದೆ. ಇದನ್ನು ಪ್ರಚಾರ ಮಾಡಬೇಕು ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಮಹದೇವು ಮಾತನಾಡಿ, ಜಿಲ್ಲಾ ಪ್ರಚಾರ ಸಮಿತಿ ಆದ ಮೇಲೆ ಒಳ್ಳೆಯ ಕೆಲಸಗಳು ನಡೆಯುತ್ತಿವೆ. ಕಾಂಗ್ರೆಸ್ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅವುಗಳನ್ನು ತಳಮಟ್ಟದಲ್ಲಿ ಪ್ರಚಾರ ಪಡಿಸಬೇಕು ಎಂದರು. ಮತ್ತೊಬ್ಬ ಜಿಲ್ಲಾ ಕಾರ್ಯದರ್ಶಿ ಚಿಕ್ಕಮಹದೇವು, ಜಿಲ್ಲಾ ವಕ್ತಾರ ಕೆರೆಹಳ್ಳಿ ನವೀನ್, ತಾ.ಪಂ.ಮಾಜಿ ಸದಸ್ಯ ಕುಮಾರನಾಯಕ್, ಕೆಬ್ಬೇಪುರ ಮಧು ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಉಪಾಧ್ಯಕ್ಷರಾದ ಸೈಯದ್ ನಜುರುಲ್ಲಾ, ಅಶೋಕ್ ಕುಮಾರ್, ಮಹಾಲಿಂಗಸ್ವಾಮಿ, ಜಿಲ್ಲಾ ಮುಖ್ಯ ಸಂಯೋಜಕರಾದ ಹೆಗ್ಗವಾಡಿ ಕೆಂಪರಾಜು, ಕೆರೆಹಳ್ಳಿ ರಾಜಕುಮಾರ್, ಪುಟ್ಟಸ್ವಾಮಿ, ಮೊಹಮ್ಮದ್ ಇಮ್ಮಾದ್ ವುಲ್ಲಾ, ಸಿದ್ದರಾಜು ನಾಯಕ, ಶಂಕರ್, ರುದ್ರೇಶ್, ಅರ್.ಡಿ .ಉಲ್ಲಾಸ್,ನಿಜಾಂ ಮುದ್ದೀನ್, ಬ್ಲಾಕ್ ಅಧ್ಯಕ್ಷರಾದ ಬಿಸಲವಾಡಿ ರವಿ, ಅಪ್ಸರ್ ಅಹಮದ್, ಮನೋಹರ, ವಿ.ಪ್ರಸಾದ್, ಜಿ.ಕೆ.ಲೋಕೇಶ್, ಬಾಲಕೃಷ್ಣ, ಪದಾಧಿಕಾರಿಗಳು, ಜ್ಯೋತಿ ಪ್ರಕಾಶ್, ಮಹದೇವಮ್ಮ, ಭಾಗವಹಿಸಿದ್ದರು.
ಕಾಂಗ್ರೆಸ್ ಸರ್ಕಾರದ ಸಾಧನೆಯನ್ನು ಮನೆಮನೆಗೆ ತಲುಪಿಸಿ: ಹೊಸಹಳ್ಳಿಮಧುಸೂದನ್ ವರದಿ: ಹೊಮ್ಮನಂಜುಂಡನಾಯಕ ಕಾಂಗ್ರೆಸ್ ಸರ್ಕಾರದ ಸಾಧನೆಯನ್ನು ಮನೆಮನೆಗೆ ತಲುಪಿಸಿ: ಹೊಸಹಳ್ಳಿಮಧುಸೂದನ್ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಪದಾಧಿಕಾರಿಗಳ ಸಭೆ ಚಾಮರಾಜನಗರ: ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಪದಾಧಿಕಾರಿಗಳು ಗ್ರಾಮಗಳಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಗಳು, ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮನೆಮನೆಗೆ ಮನವರಿಕೆ ಮಾಡಿಕೊಟ್ಟರೆ ಮುಂಬರುವ ಚುನಾವಣೆಗಳಲ್ಲಿ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಹೊಸಹಳ್ಳಿ ಮಧುಸೂದನ್ ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪ್ರಚಾರ ಸಮಿತಿಯ ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಿತಿ ಪದಾಧಿಕಾರಿಗಳು ಬೂತ್ ಮಟ್ಟದಲ್ಲಿ ಕೆಲಸ ಮಾಡಿದರೆ ನಿಮ್ಮ ನಾಯಕತ್ವ. ಬೆಳೆಯುತ್ತದೆ. ಪ್ರಚಾರ ಸಮಿತಿ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ, ಪಕ್ಷದ ಸಂಘಟನೆಯು ಆಗುತ್ತದೆ
ಎಂದರು. ಶಾಸಕರ ಅಧ್ಯಕ್ಷತೆಯಲ್ಲಿ ಆಯಾಯ ತಾಲೂಕು ಮಟ್ಟದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಂಡು ಪ್ರಚಾರ ಸಮಿತಿಯ ಪದಾಧಿಕಾರಿಗಳಿಗೆ ಕಾಂಗ್ರೆಸ್‌ನ ಇತಿಹಾಸ, ಸರ್ಕಾರದ ಯೋಜನೆಗಳನ್ನು ಮನವರಿಕೆ ಮಾಡಿಕೊಡಲಾಗುತ್ತದೆ. ನಮ್ಮ ನಾಯಕತ್ವದ ಗುಣಗಳನ್ನು ಹೇಗೆ ರೂಪಿಸಬೇಕು. ಅದನ್ನು ಮನವರಿಕೆ ಮಾಡಿ ಕೊಡಲಾಗುತ್ತದೆ. ಅವರು ಆಗ ತಳಮಟ್ಟದಲ್ಲಿ ಕಾಂಗ್ರೆಸ್ ಕಟ್ಟಲು ಒಂದು ಅವಕಾಶ ಆಗುತ್ತದೆ ಎಂದರು. ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕಲವಾಡಿ ಗುರುಸ್ವಾಮಿ ಮಾತನಾಡಿ ಚಾಮರಾನಗರ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರಕ್ಕೆ ಪಂಚಗ್ಯಾರಂಟಿ ಯೋಜನೆಯಿಂದ 200 ಕೋಟಿ ರೂ. ಸಂದಾಯ ಆಗುತ್ತದೆ. ಇದುವರೆಗೂ 600 ಕೋಟಿ ರೂ. ಸಂದಾಯ ಆಗಿದೆ. 5 ವರ್ಷಗಳಿಗೆ ಒಂದು ಸಾವಿರ ಕೋಟಿಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಆಗಿದೆ. ಇದನ್ನು ಪ್ರಚಾರ ಮಾಡಬೇಕು ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಆರ್.ಮಹದೇವು ಮಾತನಾಡಿ, ಜಿಲ್ಲಾ ಪ್ರಚಾರ ಸಮಿತಿ ಆದ ಮೇಲೆ ಒಳ್ಳೆಯ ಕೆಲಸಗಳು ನಡೆಯುತ್ತಿವೆ. ಕಾಂಗ್ರೆಸ್ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅವುಗಳನ್ನು ತಳಮಟ್ಟದಲ್ಲಿ ಪ್ರಚಾರ ಪಡಿಸಬೇಕು ಎಂದರು. ಮತ್ತೊಬ್ಬ ಜಿಲ್ಲಾ ಕಾರ್ಯದರ್ಶಿ ಚಿಕ್ಕಮಹದೇವು, ಜಿಲ್ಲಾ ವಕ್ತಾರ ಕೆರೆಹಳ್ಳಿ ನವೀನ್, ತಾ.ಪಂ.ಮಾಜಿ ಸದಸ್ಯ ಕುಮಾರನಾಯಕ್, ಕೆಬ್ಬೇಪುರ ಮಧು ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಉಪಾಧ್ಯಕ್ಷರಾದ ಸೈಯದ್ ನಜುರುಲ್ಲಾ, ಅಶೋಕ್ ಕುಮಾರ್, ಮಹಾಲಿಂಗಸ್ವಾಮಿ, ಜಿಲ್ಲಾ ಮುಖ್ಯ ಸಂಯೋಜಕರಾದ ಹೆಗ್ಗವಾಡಿ ಕೆಂಪರಾಜು, ಕೆರೆಹಳ್ಳಿ ರಾಜಕುಮಾರ್, ಪುಟ್ಟಸ್ವಾಮಿ, ಮೊಹಮ್ಮದ್ ಇಮ್ಮಾದ್ ವುಲ್ಲಾ, ಸಿದ್ದರಾಜು ನಾಯಕ, ಶಂಕರ್, ರುದ್ರೇಶ್, ಅರ್.ಡಿ .ಉಲ್ಲಾಸ್,ನಿಜಾಂ ಮುದ್ದೀನ್, ಬ್ಲಾಕ್ ಅಧ್ಯಕ್ಷರಾದ ಬಿಸಲವಾಡಿ ರವಿ, ಅಪ್ಸರ್ ಅಹಮದ್, ಮನೋಹರ, ವಿ.ಪ್ರಸಾದ್, ಜಿ.ಕೆ.ಲೋಕೇಶ್, ಬಾಲಕೃಷ್ಣ, ಪದಾಧಿಕಾರಿಗಳು, ಜ್ಯೋತಿ ಪ್ರಕಾಶ್, ಮಹದೇವಮ್ಮ, ಭಾಗವಹಿಸಿದ್ದರು.
- ಕಾಂಗ್ರೆಸ್ ಸರ್ಕಾರದ ಸಾಧನೆಯನ್ನು ಮನೆಮನೆಗೆ ತಲುಪಿಸಿ: ಹೊಸಹಳ್ಳಿಮಧುಸೂದನ್ ವರದಿ: ಹೊಮ್ಮನಂಜುಂಡನಾಯಕ ಕಾಂಗ್ರೆಸ್ ಸರ್ಕಾರದ ಸಾಧನೆಯನ್ನು ಮನೆಮನೆಗೆ ತಲುಪಿಸಿ: ಹೊಸಹಳ್ಳಿಮಧುಸೂದನ್ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಪದಾಧಿಕಾರಿಗಳ ಸಭೆ ಚಾಮರಾಜನಗರ: ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಪದಾಧಿಕಾರಿಗಳು ಗ್ರಾಮಗಳಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಗಳು, ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮನೆಮನೆಗೆ ಮನವರಿಕೆ ಮಾಡಿಕೊಟ್ಟರೆ ಮುಂಬರುವ ಚುನಾವಣೆಗಳಲ್ಲಿ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಹೊಸಹಳ್ಳಿ ಮಧುಸೂದನ್ ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪ್ರಚಾರ ಸಮಿತಿಯ ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಿತಿ ಪದಾಧಿಕಾರಿಗಳು ಬೂತ್ ಮಟ್ಟದಲ್ಲಿ ಕೆಲಸ ಮಾಡಿದರೆ ನಿಮ್ಮ ನಾಯಕತ್ವ. ಬೆಳೆಯುತ್ತದೆ. ಪ್ರಚಾರ ಸಮಿತಿ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ, ಪಕ್ಷದ ಸಂಘಟನೆಯು ಆಗುತ್ತದೆ ಎಂದರು. ಶಾಸಕರ ಅಧ್ಯಕ್ಷತೆಯಲ್ಲಿ ಆಯಾಯ ತಾಲೂಕು ಮಟ್ಟದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಂಡು ಪ್ರಚಾರ ಸಮಿತಿಯ ಪದಾಧಿಕಾರಿಗಳಿಗೆ ಕಾಂಗ್ರೆಸ್‌ನ ಇತಿಹಾಸ, ಸರ್ಕಾರದ ಯೋಜನೆಗಳನ್ನು ಮನವರಿಕೆ ಮಾಡಿಕೊಡಲಾಗುತ್ತದೆ. ನಮ್ಮ ನಾಯಕತ್ವದ ಗುಣಗಳನ್ನು ಹೇಗೆ ರೂಪಿಸಬೇಕು. ಅದನ್ನು ಮನವರಿಕೆ ಮಾಡಿ ಕೊಡಲಾಗುತ್ತದೆ. ಅವರು ಆಗ ತಳಮಟ್ಟದಲ್ಲಿ ಕಾಂಗ್ರೆಸ್ ಕಟ್ಟಲು ಒಂದು ಅವಕಾಶ ಆಗುತ್ತದೆ ಎಂದರು. ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕಲವಾಡಿ ಗುರುಸ್ವಾಮಿ ಮಾತನಾಡಿ ಚಾಮರಾನಗರ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರಕ್ಕೆ ಪಂಚಗ್ಯಾರಂಟಿ ಯೋಜನೆಯಿಂದ 200 ಕೋಟಿ ರೂ. ಸಂದಾಯ ಆಗುತ್ತದೆ. ಇದುವರೆಗೂ 600 ಕೋಟಿ ರೂ. ಸಂದಾಯ ಆಗಿದೆ. 5 ವರ್ಷಗಳಿಗೆ ಒಂದು ಸಾವಿರ ಕೋಟಿಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಆಗಿದೆ. ಇದನ್ನು ಪ್ರಚಾರ ಮಾಡಬೇಕು ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಮಹದೇವು ಮಾತನಾಡಿ, ಜಿಲ್ಲಾ ಪ್ರಚಾರ ಸಮಿತಿ ಆದ ಮೇಲೆ ಒಳ್ಳೆಯ ಕೆಲಸಗಳು ನಡೆಯುತ್ತಿವೆ. ಕಾಂಗ್ರೆಸ್ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅವುಗಳನ್ನು ತಳಮಟ್ಟದಲ್ಲಿ ಪ್ರಚಾರ ಪಡಿಸಬೇಕು ಎಂದರು. ಮತ್ತೊಬ್ಬ ಜಿಲ್ಲಾ ಕಾರ್ಯದರ್ಶಿ ಚಿಕ್ಕಮಹದೇವು, ಜಿಲ್ಲಾ ವಕ್ತಾರ ಕೆರೆಹಳ್ಳಿ ನವೀನ್, ತಾ.ಪಂ.ಮಾಜಿ ಸದಸ್ಯ ಕುಮಾರನಾಯಕ್, ಕೆಬ್ಬೇಪುರ ಮಧು ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಉಪಾಧ್ಯಕ್ಷರಾದ ಸೈಯದ್ ನಜುರುಲ್ಲಾ, ಅಶೋಕ್ ಕುಮಾರ್, ಮಹಾಲಿಂಗಸ್ವಾಮಿ, ಜಿಲ್ಲಾ ಮುಖ್ಯ ಸಂಯೋಜಕರಾದ ಹೆಗ್ಗವಾಡಿ ಕೆಂಪರಾಜು, ಕೆರೆಹಳ್ಳಿ ರಾಜಕುಮಾರ್, ಪುಟ್ಟಸ್ವಾಮಿ, ಮೊಹಮ್ಮದ್ ಇಮ್ಮಾದ್ ವುಲ್ಲಾ, ಸಿದ್ದರಾಜು ನಾಯಕ, ಶಂಕರ್, ರುದ್ರೇಶ್, ಅರ್.ಡಿ .ಉಲ್ಲಾಸ್,ನಿಜಾಂ ಮುದ್ದೀನ್, ಬ್ಲಾಕ್ ಅಧ್ಯಕ್ಷರಾದ ಬಿಸಲವಾಡಿ ರವಿ, ಅಪ್ಸರ್ ಅಹಮದ್, ಮನೋಹರ, ವಿ.ಪ್ರಸಾದ್, ಜಿ.ಕೆ.ಲೋಕೇಶ್, ಬಾಲಕೃಷ್ಣ, ಪದಾಧಿಕಾರಿಗಳು, ಜ್ಯೋತಿ ಪ್ರಕಾಶ್, ಮಹದೇವಮ್ಮ, ಭಾಗವಹಿಸಿದ್ದರು.3
- ಮೈಸೂರಿನಲ್ಲಿ ಮಲಬಾರಿ ರುಚಿಯ ಸವಿರುಚಿ – ಮಲಬಾರಿ ರೆಸ್ಟೋ ಕೆಫೆ ಸಿಗುತ್ತದೆ ಮೈಸೂರು ನಗರದ ರಾಜೇಂದ್ರನಗರ–ಹಳೇ ಕೇಸರೆ ಭಾಗದಲ್ಲಿರುವ ಮಲಬಾರಿ ರೆಸ್ಟೋ ಕೆಫೆ ಮಲಬಾರ್ ಹಾಗೂ ಕೇರಳ ಶೈಲಿಯ ಆಹಾರ ಪ್ರಿಯರಿಗೆ ಗಮನ ಸೆಳೆಯುವ ಆಹಾರ ತಾಣವಾಗಿದೆ. ಇಲ್ಲಿ ಭಾರತೀಯ, ಅರೇಬಿಕ್ ಮತ್ತು ದಕ್ಷಿಣ ಭಾರತೀಯ ಖಾದ್ಯಗಳ ವೈವಿಧ್ಯಮಯ ಮೆನು ಲಭ್ಯವಿದೆ. ಮಲಬಾರ್ ಚಿಕನ್ ಬಿರಿಯಾನಿ, ಚಿಕನ್ ದಮ್ ಬಿರಿಯಾನಿ, ವಿವಿಧ ಬಗೆಯ ಮಂಧಿ, ಅಲ್ಫಹಮ್, ಶವಾಯಿ ಗ್ರಿಲ್, ಶವರ್ಮಾ, ಕೇರಳ ಪರೋಟ, ಪುಟ್ಟು ಸೇರಿದಂತೆ ಹಲವು ಖಾದ್ಯಗಳನ್ನು ಇಲ್ಲಿ ಸವಿಯಬಹುದು. ವಿಶೇಷವಾಗಿ ಪೆಪ್ಪರ್ ಅಲ್ಫಹಮ್, ಪೆರಿ ಪೆರಿ ಅಲ್ಫಹಮ್, ಹನಿ ಚಿಲ್ಲಿ ಅಲ್ಫಹಮ್ ಹಾಗೂ ವಿವಿಧ ಬಗೆಯ ಚಿಕನ್ ಮಂಧಿ ಮೆನುವಿನಲ್ಲಿವೆ. ಆಹಾರದ ಜೊತೆಗೆ ತಾಜಾ ಜ್ಯೂಸ್, ಮಿಲ್ಕ್‌ಶೇಕ್, ಮೊಜಿಟೋ, ಚಹಾ, ಕಾಫಿ ಹಾಗೂ ಸ್ನ್ಯಾಕ್ಸ್‌ಗಳಿಗೂ ಆಯ್ಕೆಗಳಿವೆ. ಸಸ್ಯಾಹಾರಿಗಳಿಗೆ ಕಡಲ ಕರಿ, ಪನೀರ್, ಮಶ್ರೂಮ್ ಸೇರಿದಂತೆ ಹಲವು ಖಾದ್ಯಗಳಿವೆ. ವಿಳಾಸ: 21, 3ನೇ ಹಂತ, ಹಳೇ ಕೇಸರೆ, ಆರ್.ಎಸ್. ನಾಯ್ಡುನಗರ, ಮೈಸೂರು–570007.1
- ಹನೂರು: ತಾಲೂಕಿನ ಮಂಗಲ ಗ್ರಾಮದ ಹುಲುಸುಗುಡ್ಡೆ ಸಮೀಪದ ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಮೂಲಕ ನೀರು ಹರಿಯುತ್ತಿದ್ದು, ಸುತ್ತಮುತ್ತಲಿನ ರೈತರಲ್ಲಿ ಸಂತಸ ಮೂಡಿಸಿದೆ. ಬರದ ಸಂದರ್ಭದಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಅವರ ಪ್ರಯತ್ನದಿಂದ ಕಾವೇರಿ ನದಿ ಮೂಲದಿಂದ ಕೆರೆಗೆ ನೀರು ಹರಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದೀಗ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕೆರೆ ಭರ್ತಿಯಾಗಿ ನೀರು ಹೊರಹರಿಯುತ್ತಿದೆ. ಸುಮಾರು 40 ಎಂಸಿಎಫ್‌ಟಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಕೆರೆಯ 980 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ಲಭ್ಯತೆ ಹೆಚ್ಚುವ ನಿರೀಕ್ಷೆಯಿದೆ. ಕೆರೆ ಭರ್ತಿಯಾಗಿರುವುದರಿಂದ ಸುತ್ತಮುತ್ತಲಿನ ಚಿಂಚಳ್ಳಿ, ಮಣಗಳ್ಳಿ, ಬಂಡಳ್ಳಿ ಸೇರಿದಂತೆ ಹಲವು ಗ್ರಾಮಗಳ ತೋಡುಬಾವಿ ಹಾಗೂ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಸುಧಾರಿಸುವ ಆಶಾಭಾವನೆ ರೈತರಲ್ಲಿದೆ. ಕೆರೆ ಹಾಗೂ ಕಾಲುವೆಗಳ ನಿರಂತರ ನಿರ್ವಹಣೆಗೆ ಸಂಬಂಧಿಸಿದ ಇಲಾಖೆಗಳು ಗಮನಹರಿಸಿ, ಸಂಗ್ರಹವಾಗಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ರೈತರು ಮನವಿ ಮಾಡಿದ್ದಾರೆ. ಹನೂರು: ತಾಲೂಕಿನ ಮಂಗಲ ಗ್ರಾಮದ ಹುಲುಸುಗುಡ್ಡೆ ಸಮೀಪದ ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಮೂಲಕ ನೀರು ಹರಿಯುತ್ತಿದ್ದು, ಸುತ್ತಮುತ್ತಲಿನ ರೈತರಲ್ಲಿ ಸಂತಸ ಮೂಡಿಸಿದೆ. ಬರದ ಸಂದರ್ಭದಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಅವರ ಪ್ರಯತ್ನದಿಂದ ಕಾವೇರಿ ನದಿ ಮೂಲದಿಂದ ಕೆರೆಗೆ ನೀರು ಹರಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದೀಗ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕೆರೆ ಭರ್ತಿಯಾಗಿ ನೀರು ಹೊರಹರಿಯುತ್ತಿದೆ. ಸುಮಾರು 40 ಎಂಸಿಎಫ್‌ಟಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಕೆರೆಯ 980 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ಲಭ್ಯತೆ ಹೆಚ್ಚುವ ನಿರೀಕ್ಷೆಯಿದೆ. ಕೆರೆ ಭರ್ತಿಯಾಗಿರುವುದರಿಂದ ಸುತ್ತಮುತ್ತಲಿನ ಚಿಂಚಳ್ಳಿ, ಮಣಗಳ್ಳಿ, ಬಂಡಳ್ಳಿ ಸೇರಿದಂತೆ ಹಲವು ಗ್ರಾಮಗಳ ತೋಡುಬಾವಿ ಹಾಗೂ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಸುಧಾರಿಸುವ ಆಶಾಭಾವನೆ ರೈತರಲ್ಲಿದೆ. ಕೆರೆ ಹಾಗೂ ಕಾಲುವೆಗಳ ನಿರಂತರ ನಿರ್ವಹಣೆಗೆ ಸಂಬಂಧಿಸಿದ ಇಲಾಖೆಗಳು ಗಮನಹರಿಸಿ, ಸಂಗ್ರಹವಾಗಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ರೈತರು ಮನವಿ ಮಾಡಿದ್ದಾರೆ.2
- ರಾಮನಗುಡ್ಡ ಕೆರೆ ಭರ್ತಿ; ಕೋಡಿ ಬಿದ್ದು ಹರಿದ ನೀರು ಶಾಸಕ ಎಂ.ಆರ್. ಮಂಜುನಾಥ್ ಅವರ ಪ್ರಯತ್ನಕ್ಕೆ ರೈತರ ಮೆಚ್ಚುಗೆ; 980 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ಭರವಸೆ ಹನೂರು: ತಾಲ್ಲೂಕಿನ ಮಂಗಲ ಗ್ರಾಮದ ಹುಲುಸುಗುಡ್ಡೆ ಬಳಿ ಇರುವ ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದು ನೀರು ಹರಿಯುತ್ತಿದ್ದು, ಹನೂರು ಸುತ್ತಮುತ್ತಲಿನ ಗ್ರಾಮಗಳ ರೈತರ ಮುಖದಲ್ಲಿ ಸಂತಸ ಮೂಡಿಸಿದೆ. ಹಲವು ವರ್ಷಗಳಿಂದ ನೀರಿನ ಕೊರತೆ ಹಾಗೂ ಬರದ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಕೃಷಿಕರಿಗೆ ಕೆರೆ ಭರ್ತಿಯಾಗಿರುವುದು ಹೊಸ ಆಶಾಭಾವನೆ ಮೂಡಿಸಿದೆ. ಸತತ ಮಳೆ ಕೊರತೆಯಿಂದ ಬರದ ಛಾಯೆ ಆವರಿಸಿದ್ದ ಸಂದರ್ಭದಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಅವರ ಪ್ರಯತ್ನದ ಫಲವಾಗಿ ಕಾವೇರಿ ನದಿ ಮೂಲದಿಂದ ರಾಮನಗುಡ್ಡ ಕೆರೆಗೆ ನೀರು ತುಂಬಿಸುವ ಕಾರ್ಯ ಕೈಗೊಳ್ಳಲಾಗಿತ್ತು. ಇದರ ಪರಿಣಾಮ ಬೇಸಿಗೆಯ ದಿನಗಳಲ್ಲಿಯೂ ಕೆರೆಯಲ್ಲಿ ನೀರು ಸಂಗ್ರಹವಾಗಿತ್ತು. ಇದೀಗ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಮೂಲಕ ನೀರು ಹರಿಯುತ್ತಿದೆ. ಕೆರೆಯಿಂದ ನೀರು ಹರಿಯುತ್ತಿರುವ ದೃಶ್ಯ ಸ್ಥಳೀಯರಲ್ಲಿ ಹರ್ಷದ ವಾತಾವರಣ ಮೂಡಿಸಿದೆ. ಸುಮಾರು 40 ಎಂಸಿಎಫ್‌ಟಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ರಾಮನಗುಡ್ಡ ಕೆರೆಯ ಅಚ್ಚುಕಟ್ಟು ಪ್ರದೇಶ ಸುಮಾರು 980 ಎಕರೆಗಳಷ್ಟಿದೆ. ಕೆರೆ ಸಂಪೂರ್ಣ ಭರ್ತಿಯಾಗಿರುವುದರಿಂದ ಅಚ್ಚುಕಟ್ಟು ಪ್ರದೇಶದ ಕೃಷಿ ಭೂಮಿಗಳಿಗೆ ನೀರಿನ ಲಭ್ಯತೆ ಹೆಚ್ಚುವ ನಿರೀಕ್ಷೆ ಇದ್ದು, ರೈತರು ಕೃಷಿ ಚಟುವಟಿಕೆಗಳನ್ನು ಹೆಚ್ಚಿನ ಆತ್ಮವಿಶ್ವಾಸದಿಂದ ಕೈಗೊಳ್ಳಲು ಅನುಕೂಲವಾಗಲಿದೆ. ಈಗಾಗಲೇ ಕೆರೆಯ ಅಚ್ಚುಕಟ್ಟು ಪ್ರದೇಶ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು, ಉತ್ತಮ ಬೆಳೆಯ ನಿರೀಕ್ಷೆ ರೈತರಲ್ಲಿ ಮೂಡಿದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ಹೆಚ್ಚಳದ ನಿರೀಕ್ಷೆ:ರಾಮನಗುಡ್ಡ ಕೆರೆ ಭರ್ತಿಯಾಗಿರುವುದರಿಂದ ಕೇವಲ ಅಚ್ಚುಕಟ್ಟು ಪ್ರದೇಶದ ಕೃಷಿಗೆ ಮಾತ್ರವಲ್ಲದೆ ಸುತ್ತಮುತ್ತಲಿನ ಹಲವು ಗ್ರಾಮಗಳ ಅಂತರ್ಜಲ ಮಟ್ಟ ಸುಧಾರಣೆಯಾಗುವ ನಿರೀಕ್ಷೆಯೂ ಹೆಚ್ಚಾಗಿದೆ. ಕೆರೆಯಿಂದ ಹಾಗೂ ಹಳ್ಳದ ಮೂಲಕ ನೀರು ಹರಿದು ಬರುವುದರಿಂದ ಚಿಂಚಳ್ಳಿ, ಮಣಗಳ್ಳಿ, ಬಂಡಳ್ಳಿ, ತೋಮಿಯರ್ ಪಾಳ್ಯ, ಕೆ.ವಿ.ಎನ್. ದೊಡ್ಡಿ, ಎಂ.ಟಿ. ದೊಡ್ಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ತೋಡುಬಾವಿ ಮತ್ತು ಕೊಳವೆಬಾವಿಗಳಿಗೆ ನೀರಿನ ಮರುಪೂರೈಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ರೈತರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಭಾಗದ ತೆರೆದ ಬಾವಿಗಳು ಹಾಗೂ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಾದರೆ ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ಅನುಕೂಲವಾಗಲಿದೆ. ಕುಡಿಯುವ ನೀರಿನ ಮೂಲಗಳ ಮೇಲಿನ ಒತ್ತಡವೂ ಕಡಿಮೆಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಬೇಸಿಗೆ ಸಂದರ್ಭದಲ್ಲಿ ನೀರಿನ ಕೊರತೆಯಿಂದ ಸಂಕಷ್ಟಕ್ಕೊಳಗಾಗುವ ಜಾನುವಾರುಗಳಿಗೂ ಕೆರೆಯ ನೀರು ಆಶ್ರಯವಾಗಲಿದೆ ಎಂದು ಸ್ಥಳೀಯರು ಹೇಳಿದ್ದಾರೆ. ರಾಮನಗುಡ್ಡ ಕೆರೆಯ ಎಡದಂಡೆಯ ವಿಸ್ತೀರ್ಣ ಸುಮಾರು 3.95 ಎಕರೆ ಹಾಗೂ ಬಲದಂಡೆಯ ವಿಸ್ತೀರ್ಣ ಸುಮಾರು 4.20 ಎಕರೆ ಇದ್ದು, ಕೆರೆ ಭರ್ತಿಯಾಗಿ ಕೋಡಿ ಮೂಲಕ ನೀರು ಹರಿಯುತ್ತಿರುವುದು ಕೆರೆಯ ಜಲಸಂಗ್ರಹ ಸಾಮರ್ಥ್ಯದ ಸದುಪಯೋಗಕ್ಕೆ ಸಾಕ್ಷಿಯಾಗಿದೆ. ಮಳೆ ನೀರನ್ನು ಸಮರ್ಪಕವಾಗಿ ಸಂಗ್ರಹಿಸುವುದರ ಜೊತೆಗೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸುವ ಕಾರ್ಯದಿಂದ ಕೆರೆಗೆ ನೀರಿನ ಲಭ್ಯತೆ ಹೆಚ್ಚಾಗಿರುವುದು ರೈತರಲ್ಲಿ ವಿಶ್ವಾಸ ಮೂಡಿಸಿದೆ. ಕೆರೆ ಭರ್ತಿಯಾಗಿರುವುದರಿಂದ ಸುಮಾರು 980 ಎಕರೆ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಕೃಷಿ ಚಟುವಟಿಕೆಗಳ ಕುರಿತು ಉತ್ಸಾಹ ಹೆಚ್ಚಾಗಿದೆ. ನೀರಿನ ಲಭ್ಯತೆಯಿಂದ ಬೆಳೆ ಬೆಳೆಯಲು ಅನುಕೂಲವಾಗುವುದರ ಜೊತೆಗೆ ಕೃಷಿ ಆಧಾರಿತ ಕುಟುಂಬಗಳ ಆದಾಯಕ್ಕೂ ನೆರವಾಗುವ ನಿರೀಕ್ಷೆ ವ್ಯಕ್ತವಾಗಿದೆ. ಕೆರೆಯ ನೀರು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಕೃಷಿ ಆರ್ಥಿಕತೆಗೆ ಬಲ ನೀಡುವ ಮೂಲಕ ರೈತರ ಬದುಕಿನಲ್ಲಿ ಸ್ಥಿರತೆ ತರಲು ಸಹಕಾರಿಯಾಗಲಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ. ಶಾಸಕ ಮಂಜುನಾಥ್ ಅವರ ಪ್ರಯತ್ನಕ್ಕೆ ಮೆಚ್ಚುಗೆ :ರಾಮನಗುಡ್ಡ ಕೆರೆಗೆ ನೀರು ಹರಿದು ಬರುವಂತೆ ಮಾಡುವ ನಿಟ್ಟಿನಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಅವರು ಕೈಗೊಂಡ ಪ್ರಯತ್ನಗಳು ಇದೀಗ ಫಲ ನೀಡಿವೆ ಎಂದು ಸ್ಥಳೀಯ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬರದ ಸಂದರ್ಭದಲ್ಲಿ ನೀರಿನ ಲಭ್ಯತೆ ಕಲ್ಪಿಸುವ ನಿಟ್ಟಿನಲ್ಲಿ ಕೆರೆಗೆ ನೀರು ತುಂಬಿಸುವ ಕಾರ್ಯ ಕೈಗೊಂಡಿದ್ದು, ಇದೀಗ ಉತ್ತಮ ಮಳೆಯೊಂದಿಗೆ ಕೆರೆ ಸಂಪೂರ್ಣ ಭರ್ತಿಯಾಗಿರುವುದು ಈ ಭಾಗದ ಕೃಷಿಕರಿಗೆ ಅನುಕೂಲವಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ. ನೀರಿನ ಸಮಸ್ಯೆ ಎದುರಾದ ಸಂದರ್ಭದಲ್ಲಿ ಕೆರೆಗಳ ಸಂರಕ್ಷಣೆ, ಹೂಳು ತೆರವು, ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸುವುದು ಹಾಗೂ ಮಳೆ ನೀರು ಸಮರ್ಪಕವಾಗಿ ಕೆರೆಗೆ ಹರಿಯುವಂತೆ ಮಾಡುವ ವ್ಯವಸ್ಥೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದು ರೈತರ ಬಹುಕಾಲದ ಬೇಡಿಕೆಯಾಗಿದೆ. ರಾಮನಗುಡ್ಡ ಕೆರೆ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿಯೂ ನೀರಿನ ಸಂಗ್ರಹವನ್ನು ಕಾಪಾಡಿಕೊಳ್ಳಲು ಕೆರೆ ಹಾಗೂ ಕಾಲುವೆಗಳ ನಿರಂತರ ನಿರ್ವಹಣೆಗೆ ಸಂಬಂಧಿಸಿದ ಇಲಾಖೆಗಳು ಗಮನಹರಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ. ಕೆರೆಯಲ್ಲಿ ಸಂಗ್ರಹವಾಗಿರುವ ನೀರು ವ್ಯರ್ಥವಾಗಿ ಹರಿದುಹೋಗದಂತೆ ಕಾಲುವೆಗಳ ನಿರ್ವಹಣೆ, ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಸಮರ್ಪಕ ಬಳಕೆ ಹಾಗೂ ಜಲಸಂಪನ್ಮೂಲಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕಿದೆ. ಕೆರೆಯ ನೀರು ಸುತ್ತಮುತ್ತಲಿನ ಗ್ರಾಮಗಳ ತೋಡುಬಾವಿ ಮತ್ತು ಕೊಳವೆಬಾವಿಗಳಿಗೆ ಮರುಪೂರೈಕೆಯಾಗುವ ಮೂಲಕ ಅಂತರ್ಜಲ ಮಟ್ಟ ಸುಧಾರಿಸಿದರೆ ಮುಂದಿನ ದಿನಗಳಲ್ಲಿ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳಿಗೆ ಮತ್ತಷ್ಟು ಪರಿಹಾರ ದೊರೆಯಲಿದೆ ಎಂಬ ನಿರೀಕ್ಷೆ ರೈತರಲ್ಲಿದೆ. ಕಳೆದ ಕೆಲವು ದಿನಗಳಿಂದ ರಾಮನಗುಡ್ಡ ಕೆರೆಯ ಕೋಡಿ ಮೂಲಕ ನೀರು ಹರಿಯುತ್ತಿರುವ ದೃಶ್ಯ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಕೆರೆಯ ಬಳಿ ಸೇರುತ್ತಿರುವ ರೈತರು ಹಾಗೂ ಸಾರ್ವಜನಿಕರು ನೀರಿನ ಹರಿವನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಹಲವು ವರ್ಷಗಳಿಂದ ನೀರಿಗಾಗಿ ಎದುರು ನೋಡುತ್ತಿದ್ದ ಕೃಷಿಕರ ಪಾಲಿಗೆ ಕೆರೆ ಭರ್ತಿಯಾಗಿರುವುದು ಸಂತಸದ ಸಂಗತಿಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಒಟ್ಟಿನಲ್ಲಿ, ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದು ಹರಿಯುತ್ತಿರುವುದು ಸುಮಾರು 980 ಎಕರೆ ಅಚ್ಚುಕಟ್ಟು ಪ್ರದೇಶದ ಕೃಷಿಗೆ ನೀರಿನ ಭರವಸೆ ನೀಡುವುದರ ಜೊತೆಗೆ ಚಿಂಚಳ್ಳಿ, ಮಣಗಳ್ಳಿ, ಬಂಡಳ್ಳಿ, ತೋಮಿಯರ್ ಪಾಳ್ಯ, ಕೆ.ವಿ.ಎನ್. ದೊಡ್ಡಿ, ಎಂ.ಟಿ. ದೊಡ್ಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ತೋಡುಬಾವಿ ಮತ್ತು ಕೊಳವೆಬಾವಿಗಳ ಅಂತರ್ಜಲ ಮಟ್ಟ ಸುಧಾರಣೆಗೆ ಪೂರಕ ವಾತಾವರಣ ನಿರ್ಮಿಸಿದೆ. ಕೆರೆಯ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಜಲಸಂಪನ್ಮೂಲವನ್ನು ಮುಂದಿನ ವರ್ಷಗಳಲ್ಲಿಯೂ ಕಾಪಾಡಿಕೊಳ್ಳುವುದು ರೈತರ ಆಶಯವಾಗಿದೆ.1
- All About,Statement After What let our then Congress Corporater's activities regarding to vacate their private land *ಭಾರತ ನಲ್ಲಿ ವೈರಲ್*1
- ಮಳೆ ಇಲ್ಲದೆ ಬರದ ಭವಣೆಯಲ್ಲಿ ಬೆಂದು ಬೆಂಗಾಡಾಗಿದ್ದ ತಾಲ್ಲೂಕಿಗೆ ಮಂಗಳವಾರ ತಂಪೆರೆದ ವರುಣದೇವ ಮಳವಳ್ಳಿ : ಕಳೆದ ಕೆಲವಾರು ತಿಂಗಳಿಂದ ಮಳೆಯ ಸುಳಿವೇ ಕಾಣದೆ ಸುಡು ಬಿಸಿಲ ಝಳ ದಿಂದ ಕಾದ ಬೆಂಗಾಡಾಗಿ ಹೋಗಿದ್ದ ಮಳವಳ್ಳಿ ತಾಲ್ಲೂಕಿಗೆ ಮಂಗಳವಾರ ರಾತ್ರಿ ವರುಣ ದೇವ ಕೃಪೆ ತೋರಿದ್ದು ಒಂದು ಗಂಟೆಗೂ ಹೆಚ್ಚುಕಾಲ ಸುರಿದ ಅಬ್ಬರದ ಮಳೆ ಒಣಗಿದ ಭೂಮಿಗೆ ತಂಪೆರದಿದೆ. ಮಂಗಳವಾರ ತಡರಾತ್ರಿ 9.30 ರ ಸುಮಾರಿಗೆ ಆರಂಭವಾದ ಸಿಡಿಲಬ್ಬರದ ಮಳೆ ಕಾದ ಕಬ್ಬಿಣದಂತಾಗಿದ್ದ ಭೂಮಿಗೆ ತಂಪೆರದಿದ್ದು ಬಿಸಿಲ ಝಳ ದಿಂದ ಬೆಂದು ಹೈರಾಣಾಗಿದ್ದ ಜನ ನಿಟ್ಟುಸಿರು ಬಿಡುವಂತಾ ಗಿದ್ದರೆ ತಡವಾಗಿಯಾದರೂ ಜೋರಾಗಿಯೇ ಸುರಿದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಸುಮಾರು ಒಂದುವರೆ ಗಂಟೆ ಸುರಿದ ಅಬ್ಬರದ ಮಳೆ ಹಾಗೂ ಸಿಡಿಲು ಗುಡುಗು ಸಹಿತದ ಮಳೆ ಇಡೀ ತಾಲ್ಲೂಕಿಗೆ ತಂಪೆರೆದಿದೆ. ನಂತರದಲ್ಲಿ ಇಡೀ ರಾತ್ರಿ ಸಣ್ಣದಾಗಿ ಸುರಿದ ಜಿಟಿಜಿಟಿ ಮಳೆ ಭೂಮಿಯ ಕಾವು ತಗ್ಗಿಸಿದೆ. ಒಟ್ಟಾರೆ ಈ ವರ್ಷವಿಡೀ ಭೂತಾಯಿ ಒಡಲು ತುಂಬುವ ಮಟ್ಟದ ಮಳೆಯನ್ನೇ ಕಾಣದ ಬರದ ಭವಣೆಯಿಂದ ಆತಂಕಕ್ಕೆ ಒಳಗಾಗಿದ್ದ ಜನ ಮಂಗಳವಾರ ಸುರಿದ ಭಾರಿ ಮಳೆಯಿಂದ ಸಮಾಧಾನ ಪಡುವಂತಾಗಿದೆ.1
- ಮೈಸೂರಿನಲ್ಲಿ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ.. ‘ನಕಲಿ ಹಿಂದುತ್ವವಾದಿ’ ಎಂದು ಘೋಷಣೆ | ಗಡಿಪಾರು ಮಾಡುವಂತೆ ಆಗ್ರಹ ಮೈಸೂರು: ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಾಪ್ ಸಿಂಹ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ‘ನಕಲಿ ಹಿಂದುತ್ವವಾದಿ ಪ್ರತಾಪ್ ಸಿಂಹ’, ‘ಕೋಮುವಾದಿ ಬಿಜೆಪಿ, ಕೋಮುವಾದಿ ಪ್ರತಾಪ್ ಸಿಂಹ’ ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು, ಟಿ. ನರಸೀಪುರದಲ್ಲಿ ಕೋಮು ಪ್ರಚೋದನೆಗೆ ಕಾರಣವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಗಣೇಶ ಮೂರ್ತಿ ಹಿಡಿದು, ಪಾದರಕ್ಷೆ ಧರಿಸಿ ಪ್ರತಿಭಟನೆ ನಡೆಸಿರುವುದನ್ನು ಪ್ರಶ್ನಿಸಿದ ಕಾರ್ಯಕರ್ತರು, ಧಾರ್ಮಿಕ ಭಾವನೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ರೀತಿಯ ನಡೆ ಸಮಾಜದಲ್ಲಿ ಅಶಾಂತಿ ಮೂಡಿಸುವುದಲ್ಲದೆ, ಯುವಕರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು. ಪ್ರತಾಪ್ ಸಿಂಹ ಅವರು ದಲಿತರು ಹಾಗೂ ಮುಸ್ಲಿಮರ ವಿರುದ್ಧ ದ್ವೇಷದ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿ, ಅವರನ್ನು ಗಡಿಪಾರು ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ಅವರ ಸೂಚನೆಗಳ ಕುರಿತು ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದರೆ, ಇದಕ್ಕೆ ಪ್ರತಿಯಾಗಿ ದಲಿತ ಸಂಘಟನೆಗಳು ಹಾಗೂ ಇತರ ಸಂಘಟನೆಗಳಿಂದಲೂ ಪ್ರತಿಭಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಪ್ರಕರಣ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.1
- ಚಾಮರಾಜನಗರದಲ್ಲಿ ದಸರಾ ಆಚರಿಸುವಂತೆ ಸಿಎಂಗೆ ಮನವಿ ವರದಿ:ಹೊಮ್ಮನಂಜುಂಡನಾಯಕ ಚಾಮರಾಜನಗರದಲ್ಲಿ ದಸರಾ ಆಚರಿಸುವಂತೆ ಸಿಎಂಗೆ ಮನವಿ ಚಾಮರಾಜನಗರ: ಜಿಲ್ಲೆಯಲ್ಲಿ ಈ ಸಾರಿಯ ದಸರಾ ಮಹೋತ್ಸವವನ್ನು ನಡೆಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರ ಮುಖಾಂತರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯದ ಗಡಿಪ್ರದೇಶವಾದ ಚಾಮರಾಜನಗರವು ಐತಿಹಾಸಿಕ ಮತ್ತು ಜಾನಪದ ಹಿನ್ನಲೆಯನ್ನು ಹೊಂದಿದೆ ಮತ್ತು ಈ ಹಿಂದೆ ಇದು ಮೈಸೂರು ಜಿಲ್ಲೆಯ ಅವಿಭಾಜ್ಯ ಅಂಗವಾಗಿತ್ತು ಮತ್ತು ೯ನೇ ಖಾಸಾ ಚಾಮರಾಜ ಒಡೆಯರ್‌ರವರು ಇಲ್ಲಿ ೧೭೭೪ರಲ್ಲಿ ಜನಿಸಿದ ಅಂಗವಾಗಿ ಈ ಊರಿಗೆ ಚಾಮರಾಜನಗರ ಎಂದು ನಾಮಕರಣ ಮಾಡಲಾಯಿತು. ಮೈಸೂರು ಸಂಸ್ಥಾನಕ್ಕೂ, ಚಾಮರಾಜನಗರ ಅವಿನಾಭವ ಸಂಬಂಧವಿದೆ. ಕಳೆದ ೨೦೧೩ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮತ್ತು ಅಂದಿನ ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ವಿ. ಶ್ರೀನಿವಾಸಪ್ರಸಾದ ರವರು ಹಾಗೂ ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವರಾದ ಹೆಚ್.ಎಸ್. ಮಹದೇವಪ್ರಸಾದ್‌ರವರು ತೀರ್ಮಾನಿಸಿ ಚಾಮರಾಜನಗರದಲ್ಲೂ ದಸರಾ ಕಾರ್ಯಕ್ರಮ ಪ್ರಾರಂಭ ಮಾಡಿದರು. ಇದು ಬಹಳಷ್ಟು ವರ್ಷಗಳಿಂದ ಚಾಮರಾಜನಗರ ದಸರಾ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದು ಕಳೆದ ವರ್ಷದಿಂದ ಚಾಮರಾಜನಗರದಲ್ಲಿ ದಸರಾ ನಿಂತು ಹೋಗಿದೆ ಮತ್ತು ಈ ಸಾರಿಯು ಸರ್ಕಾರದಿಂದ ಚಾಮರಾಜನಗರ ದಸರಾ ಮಾಡುವ ಲಕ್ಷಣಗಳು ಕಾಣುತ್ತಿಲ್ಲ. ಚಾಮರಾಜನಗರ ಜಿಲ್ಲೆಯಲ್ಲಿ ಸಾವಿರಾರು ಜನ ಜನಪದ, ಕಲೆ, ಸಾಂಸ್ಕೃತಿಕ, ಶೋಭಾನೆ, ಗೊರವರ ಕುಣಿತ, ಭಜನೆ, ತಂಬೂರಿ ಸೇರಿದಂತೆ ಇನ್ನೂ ಕಲೆಗಳನ್ನು ಬಲ್ಲಕಲಾವಿದರು ಇರುತ್ತಾರೆ. ಆದರೆ ರಾಜ್ಯ ಸರ್ಕಾರ ಏಕಾಏಕಿ ಯಾವುದೇ ಕಾರಣಗಳಿಲ್ಲದೆ ಚಾಮರಾಜನಗರ ದಸರಾ ನಿಲ್ಲಿಸಿರುವುದು ನೋವಿನ ಸಂಗತಿಯಾಗಿದೆ. ಒಂದು ಹೊಸ ಪರಂಪರೆಯನ್ನು ಸೃಷ್ಟಿಸಿರುವ ಸರ್ಕಾರ ಈಗ ಅದೇ ಪರಂಪರೆಯನ್ನು ನಿಲ್ಲಿಸಿರುವುದು ವಿಷಾಧನಿಯ. ಆದ್ದರಿಂದ ತಾವು ಈ ಸಾರಿಯ ಚಾಮರಾಜನಗರದಲ್ಲಿ ದಸರಾ ಕಾರ್ಯಕ್ರಮವನ್ನು ನಡೆಸಬೇಕೆಂದು ಜಿಲ್ಲೆಯ ಜನತೆಯ ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಅಧ್ಯಕ್ಷ ಶ್ರೀನಿವಾಸಗೌಡ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಪಣ್ಯದಹುಂಡಿ ರಾಜು, ಮುತ್ತಿಗೆ ಗೋವಿಂದರಾಜು, ರವಿಚಂದ್ರಪ್ರಸಾದ್ ಕಹಳೆ, ತತ್ವಪದ ರಾಚಪ್ಪ, ಸಿದ್ದರಾಜು, ರಾಚಪ್ಪ, ವೀರಗಾಸೆ ಡಾ. ಶಿವರುದ್ರಸ್ವಾಮಿ, ಜಯರಾಜು, ಮಂಗಲದ ಹೊಸೂರು ಶಿವಣ್ಣ,ರಂಗಸ್ವಾಮಿ, ಸುರೇಶ್ ಇತರರು ಹಾಜರಿದ್ದರು.4