Shuru
Apke Nagar Ki App…
ಧರ್ತಿ ಮಾತಾ ಬಚಾವೋ ಭೂಮಿ ತಾಯಿಯನ್ನ ಉಳಿಸಿ ಅಭಿಯಾನ ಅಂಗವಾಗಿ ಅರಿವು ಮೂಡಿಸುವ ಕಾರ್ಯಕ್ರಮ..
Suresh Belagere
ಧರ್ತಿ ಮಾತಾ ಬಚಾವೋ ಭೂಮಿ ತಾಯಿಯನ್ನ ಉಳಿಸಿ ಅಭಿಯಾನ ಅಂಗವಾಗಿ ಅರಿವು ಮೂಡಿಸುವ ಕಾರ್ಯಕ್ರಮ..
More news from ಕರ್ನಾಟಕ and nearby areas
- ಬೊಗಳೇರಹಟ್ಟಿ ಬಳಿ ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ ನಡೆದು ಓರ್ವ ಮೃತಪಟ್ಟ ಘಟನೆ ನಡೆದಿದೆ. ಚಿತ್ರದುರ್ಗ ತಾಲ್ಲೂಕಿನ ಬೊಗಳೇರಹಟ್ಟಿ ಬಳಿ ಘಟನೆ ನಡೆದಿದ್ದು ಕಾರಿನ ಚಾಲಕ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಇನ್ನೂ ಹೊಸಪೇಟೆ ಕಡೆಯಿಂದ ಚಿತ್ರದುರ್ಗದ ಕಡೆ ಬರುತ್ತಿದ್ದು ನಿಲ್ಲಿಸಿದ್ದ ಎಥೆನಾಲ್ ಸಾಗಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದು ಕಾರು ಸಂಪೂರ್ಣ ಜಖಂ ಗೊಂಡಿದ್ದು ಚಾಲಕ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಇನ್ನೂ ಇಳಕಲ್ ನಿಂದ ಚಿತ್ರದುರ್ಗಕ್ಕೆ ಕಾರು ಬರುತ್ತಿದ್ದು ಈ ವೇಳೆ ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಎಥೆನಾಲ್ ಸಾಗಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಘಟನೆ ನಡೆದಿದೆ.1
- Post by Suresh Belagere1
- ಚಳ್ಳಕೆರೆ: ತಾಲೂಕಿನ ನಂದಾಪುರ ಗ್ರಾಮದ ಗೊಲ್ಲರಹಟ್ಟಿಯಲ್ಲಿ ವೀರ ಚಿಕ್ಕಣ್ಣ ಸ್ವಾಮಿ ಕಳಸ ಪ್ರತಿಷ್ಠಾಪನೆ ಅಂಗವಾಗಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಭಕ್ತಿಭಾವದಿಂದ ನೆರವೇರಿದವು. ಈ ಸಂದರ್ಭದಲ್ಲಿ ಗೊಲ್ಲರಹಟ್ಟಿಯ ಗ್ರಾಮ ದೇವತೆಗಳಾದ ಗೋಲ್ಲಾಳಮ್ಮ ದೇವಿ, ಜುಂಜೇಶ್ವರ ಸ್ವಾಮಿ ಸೇರಿದಂತೆ ಸುತ್ತಮುತ್ತಲಿನ ದೇವರುಗಳನ್ನು ಗರಣಿ ಹೇಳಲು ಕರೆದುಕೊಂಡು ಹೋಗಿ, ನಂತರ ಗಂಗಾಪೂಜೆ ವಿಧಿ ನೆರವೇರಿಸಲಾಯಿತು. ಗಂಗಾಪೂಜೆಯಲ್ಲಿ ಸಾಣಿಕೆರೆ ದೇವರು ಶ್ರೀ ಗಟ್ಟೆಪ್ಪ, ಚಿತ್ರ ಲಿಂಗೇಶ್ವರ ಸ್ವಾಮಿ, ತಿಮ್ಮಪ್ಪ ಹಾಗೂ ಚಿಕ್ಕಣ್ಣ ಸ್ವಾಮಿ ಉಪಸ್ಥಿತರಿದ್ದರು. ಗಂಗಾಪೂಜೆ ಮುಗಿದ ನಂತರ ನಂದಾಪುರದ ನೂತನ ದೇವಸ್ಥಾನದ ಉದ್ಘಾಟನೆ ಪೂಜೆಗೆ ಎಲ್ಲಾ ದೇವರುಗಳನ್ನು ಕರೆತರುವ ಮುನ್ನ, ಸಂಪ್ರದಾಯದಂತೆ ಕುರಿಗಳನ್ನು ದೇವರ ಸುತ್ತ ಸುತ್ತುವರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಈ ಅಪೂರ್ವ ಸಂಪ್ರದಾಯ ಭಕ್ತರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ಆಚರಣೆಗಳಿಗೆ ಸಾಕ್ಷಿಯಾದರು. #ಚಳ್ಳಕೆರೆ #ನಂದಾಪುರ #ವೀರಚಿಕ್ಕಣ್ಣಸ್ವಾಮಿ #ಕಳಸಪ್ರತಿಷ್ಠಾಪನೆ #ಗಂಗಾಪೂಜೆ #ಗೊಲ್ಲರಹಟ್ಟಿ #ಗ್ರಾಮದೇವತೆ #ಧಾರ್ಮಿಕಕಾರ್ಯಕ್ರಮ #ಕರ್ನಾಟಕಸಂಸ್ಕೃತಿ #ಹಬ್ಬಆಚರಣೆ #Devotional #VillageFestival #Kalasapratishthapana #KannadaNews1
- “I sincerely request the Government of Karnataka to please help me. My house is a kutcha (temporary) house, and I do not have enough money to build a proper one. I request the government to provide some assistance. Right now, we are living in a house made of tin sheets and iron, and my children are suffering a lot due to the heat. There is hardly any ventilation, and no one here is listening to our problems. I humbly appeal to the government to please support us in building a proper house.”1
- Post by Karibasava Balal1
- *ತ್ರಿಶಂಕು ಸ್ಥಿತಿಯಲ್ಲಿ ಸುಂಕದಕಲ್ಲು : ಅಭಿವೃದ್ಧಿಗೊಳಿಸುವ ಭಗೀರಥ ಪ್ರಯತ್ನದಲ್ಲಿ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್*- ವಿಜಯನಗರ ಕೂಡ್ಲಿಗಿ : ಈ ಹಿಂದಿನ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿದ್ದು , ಸದ್ಯ ಕೊಟ್ಟೂರು ಹೋಬಳಿಯಲ್ಲಿರುವ. ಹಗರಿಬೊಮ್ಮನಹಳ್ಳಿಯ ರಾಂಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಸುಂಕದಕಲ್ಲು ಗ್ರಾಮ. ಆಡಳಿತಾತ್ಮಕವಾಗಿ ತೀರಾ ನಿರ್ಲಕ್ಷ್ಯಕ್ಕೀಡಾಗಿದ್ದು , ಅಭಿವೃದ್ಧಿ ಕಾಣದ ಕುಗ್ರಾಮವಗಿದೆ. ತ್ರಿಶಂಕು ಸ್ಥಿತಿಯಲ್ಲಿರುವ ಗ್ರಾಮ ಅನಾಧಾರಕ್ಕೀಡಾಗಿದ್ದು , ಗ್ರಾಮವನ್ನು ಸರ್ವತೋಮುಖವಾಗಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದಾಗಿ , ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು ಶಪಥ ಮಾಡಿದ್ದಾರೆ. ಮತ್ತು ಈ ನಿಟ್ಟಿನಲ್ಲಿ ಅವರು ಕಾರ್ಯಗತರಾಗಿದ್ದು , ಪ್ರಥಮವಾಗಿ ಕೆಕೆ ಆರ್ ಡಿಬಿ ಅನುದಾನದಲ್ಲಿ 1 ಕೋಟಿ ರೂ ವೆಚ್ಚದಲ್ಲಿ , ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಈ ಮೂಲಕ ಆಡಳಿತಾತ್ಮಕ ಅಸಹಕಾರ , ಹಾಗೂ ತಾಂತ್ರಿಕ ದೋಷಪೂರಿತವಾಗಿ ಅನಾಧಾರಕ್ಕೀಡಾಗಿರುವ. ಕುಗ್ರಾಮ ಸುಂಕದಕಲ್ಲು ಗ್ರಾಮವನ್ನು , ಮಾದರಿ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಭಗೀರಥ ಪ್ರಯತ್ನ ನಡೆಸಿ ದಾಪುಗಾಲನ್ನಿಟ್ಟಿದ್ದಾರೆ. ಮೂಲಭೂತ ಸೌಕರ್ಯಗಳ ಕೊರತೆ , ಅಧಿಕಾರಿಗಳ ಅಸಹಕಾರ ಹಾಗೂ ನಿರ್ಲಕ್ಷ್ಯ ಧೋರಣೆ ಯಿಂದ , ಹಾಗೂ ಇತರೆ ಕೊರೆತೆಗಳಿಂದ ಮುಕ್ತಗೊಳಿಸುವಲ್ಲಿ ಮೊದಲ ಆಧ್ಯತೆ ನೀಡುವುದಾಗಿ ಶಾಸಕರು ಭರವಸೆ ನೀಡಿದರು. *25ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಟಿಲ ಸಮಸ್ಯೆ ಬಗೆಹರಿಸುವಂತೆ ಶಾಸಕರಿಂದ ಸೂಚನೆ*- ಸುಂಕದಕಲ್ಲು ಗ್ರಾಮದ (ಕ್ಯಾಂಪ್ ) ಗುಂಪು ಮನೆ ಯೋಜನೆಯ ಫಲಾನುಭವಿಗಳು , ಶಾಸಕರಲ್ಲಿ ತಮ್ಮ ಅಳಲು ತೋಡಿಕೊಂಡರು. ತಾವು ಕಳೆದ 25 ವರ್ಷಗಳಿಂದ ವಾಸವಿದ್ದರೂ ಸಹ , ಈವರೆಗೆ ಇಲಾಖೆಗಳಿಂದ ಹಕ್ಕು ಪತ್ರ ನೀಡಿಲ್ಲ. ಮೂಲ ಭೂತ ಸೌಕರ್ಯಗಳು ತಮಗೆ ಗಗನ ಕುಸುಮವಾಗಿದ್ದು , ಕೂಡಲೇ ಹಕ್ಕು ಪತ್ರ ನೀಡಬೇಕು ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪುಸಿಕೊಡುವಂತೆ ಶಾಸಕರಲ್ಲಿ ನಿವಾಸಿಗಳು ಕೋರಿದರು. ಕೂಡಲೇ ಸ್ಪಂದಿಸಿದ ಶಾಸಕರು ಸ್ಥಳದಲ್ಲಿಯೇ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದರು , ಮತ್ತು ಶೀಘ್ರವೇ ಹಕ್ಕು ಪತ್ರ ವಿತರಣೆಗೆ ಅಗತ್ಯ ಕ್ರಮಕ್ಕೆ ಸೂಚಿಸಿದರು. *ಗ್ರಾಮಸ್ಥರಿಗೆ ಸ್ಪಂದಿಸದ ಪಿಡಿಓ ಅಮಾನತ್ತುಗೊಳಿಸಿ - ಶಾಸಕ ಡಾ ಎನ್ ಟಿ ಶ್ರೀನಿವಾಸ್ ಶಿಪಾರಸ್ಸು*- ಸುಂಕದಕಲ್ಲು ಗ್ರಾಮದಲ್ಲಿ , ಪಿಡಿಓ ವಿರುದ್ಧ ಇಡೀ ಗ್ರಾಮಸ್ಥರಿಂದ ಗಂಭೀರ ಆರೋಪಗಳು ಕೇಳಿಬಂದಿರುವ ಹಿನ್ನಲೆಯಲ್ಲಿ. ಕೂಡಲೇ ಶಾಸಕರು ಸ್ಥಳದಲ್ಲಿಯೇ ಇಲಾಖೆಯ , ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಮೊಬೈಲ್ ಮೂಲಕ ಸಂಪರ್ಕಿಸಿದ್ದು. ಇಡೀ ಗ್ರಾಮಕ್ಕೆ ಗ್ರಾಮವೇ ಪಿಡಿಒ ವಿರುದ್ಧ ಗಂಭೀರವಾಗಿ ಆರೋಪಗಳ ಸುರಿಮಳೆಗೈದಿದ್ದಾರೆ. ಪರಿಣಾಮ ಗ್ರಾಮಸ್ಥರ ಹಕ್ಕೊತ್ತಾಯದ ಮೇರೆಗೆ ಪಿಡಿಒ ರನ್ನು ಕೂಡಲೇ ಅಮಾನತ್ತುಗೊಳಿಸಿ ಆದೇಶಿಸುವಂತೆ. ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ , ಗ್ರಾಮಸ್ಥರ ಉಪಸ್ಥಿತಿಯಲ್ಲಿಯೇ ಶಾಸಕರು ಮೌಕಿಕ ಶಿಪಾರಸ್ಸು ನೀಡಿದರು. ಶಾಸಕರಾದ ತಾವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ದಾವಿಸಿದಾಗ ಕೂಡ , ಪಿಡಿಒರವರು ಗೈರು ಹಾಜರಿದ್ದರು ಇದು ಗ್ರಾಮಸ್ಥರ ಆರೋಪಕ್ಕೆ ಮತ್ತಷ್ಟು ಪುಷ್ಠಿ ನೀಡಿತ್ತು. ಅವರು ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ , ಗ್ರಾಮದ ಸಂದುಗೊಂದಲುಗಳಲ್ಲಿ ಸಂಚರಿಸಿದರು. ಗ್ರಾಮದ ಗಲ್ಲಿ ಗಲ್ಲಿಗಳಲ್ಕಿನ ದುಸ್ಥಿತಿ ಖುದ್ದು ವೀಕ್ಷಿಸಿದರು , ಗ್ರಾಮದೆಲ್ಲೆಡೆ ತೆರಳಿ ಗ್ರಾಮಸ್ಥರ ಅಹವಾಲುಗಳನ್ನು ಸ್ವತಃ ಅವರೇ ಆಲಿಸಿದರು. ಈ ಸಂದರ್ಭದಲ್ಲಿ ಪಿಡಿಒ ರವರು ಗ್ರಾಮವನ್ನು , ತೀರಾ ನಿರ್ಲಕ್ಷ್ಯಿಸಿದ್ದು ಗ್ರಾಮಸ್ಥರ ಅಹವಾಲುಗಳನ್ನು ಆಲಿಸುತ್ತಿಲ್ಲ. ಗ್ರಾಮಸ್ಥರೊಂದಿಗೆ ಅಹಿತಕರವಾಗಿ ವರ್ತಿಸುತ್ತಿದ್ದು. ಗ್ರಾಮದಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತಿಲ್ಲ , ಮತ್ತು ಸ್ಪಂದಿಸುತ್ತಿಲ್ಲ ಎಂದು ದೂರಿದರು. ಪಿಡಿಒರವರೇ ಗ್ರಾಮಸ್ಥರೊಂದಿಗೆ ಅನಾಗರೀಕ ರೀತಿಯಲ್ಲಿ ವರ್ತಿಸುತ್ತಿದ್ದು , ತಮ್ಮ ಗ್ರಾಮವನ್ನು ಆನಾಥವನ್ನಾಗಿಸಿದ್ದಾರೆ. ತಾಲೂಕು ಪಂಚಾಯ್ತಿ ಅಧಿಕಾರಿ ಹಾಗೂ ಪಿಡಿಒರವರು , ಗ್ರಾಮವನ್ನು ನಿರ್ಲಕ್ಷ್ಯ ದಿಂದ ಕಾಣುತ್ತಿದ್ದು , ತಮ್ಮನ್ನು ತೀರಾ ಆನಾದಾರಕ್ಕೀಡು ಮಾಡಿದ್ದಾರೆ ಎಂದು ಶಾಸಕರಲ್ಲಿ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು. ಶಾಸಕರು ಗ್ರಾಮಸ್ಥರ ಹಾಗೂ ನೆರೆದಂತಹ ನೂರಾರು ಮಹಿಳೆಯರ , ಗಂಭೀರ ಆರೋಪಗಳ ಸುರಿಮಳೆಯ ಪರಿಣಾಮ. ಮತ್ತು ಗ್ರಾಮದ ಮುಖಂಡರ , ಯುವಕರ ಹೋರಾಟಗಾರರ ಹಕ್ಕೊತ್ತಾಯದ ಮೇರೆಗೆ. ಶಾಸಕರಾದ ತಾವು ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿಗೆ ಚಾಲನೆ ನೀಡುವಲ್ಲಿ ತೊಡಗಿದ್ದಾಗಿಯೂ ಕೂಡ ಗೈರಾಗಿದ್ದು , ಹಾಗೂ ತಾವೇ ಖುದ್ದಾಗಿ ಗ್ರಾಮಸ್ಥರೆದುರಲ್ಲೇ ಪಿಡಿಒರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅಲಭ್ಯವಾದ ಪಿಡಿಒರನ್ನು. ಕೂಡಲೇ ಅಮಾನತ್ತು ಮಾಡುವಂತೆ ಇಲಾಖೆಯ ಉನ್ನತಾಧಿಕಾರಿಗೆ , ಶಾಸಕರು ಸ್ಥಳದಲ್ಲಿಯೇ ದೂರವಾಣಿ ಮೂಲಕ ಶಿಪಾರಸ್ಸು ಮಾಡಿದ್ದಾರೆ. ಈ ಸಂದರ್ಭದಲ್ಲಿ ಇಒ ಆನಂದಪ್ಪ ಹಾಜರಿದ್ದರು , ಗ್ರಾಮದ ಮುಖಂಡರು , ಮಹಿಳೆಯರು , ವೃದ್ಧರು , ಯುವಕರು , ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು , ಗ್ರಾಮದ ಹಿರಿಯರು , ವಿವಿದ ಸಮುದಾಯಗಳ ಪ್ರಮುಖರು ಉಪಸ್ಥಿತರಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಮಾಜಿ ಸಚಿವ ಬಿ ಶ್ರೀರಾಮುಲು ಹೇಳಿಕೆ, ಕಾಂಗ್ರೆಸ್ ಪಕ್ಷದಲ್ಲಿ ದಿನದಿಂದ ದಿನಕ್ಕೆ ಬಿನ್ನಮತಗಳು ಹೆಚ್ಚಾಗುತ್ತಿವೆ. ಸಿಎಂ ಸಿದ್ದರಾಮಯ್ಯ ಅವರು ಖುರ್ಚಿ ಗಟ್ಟಿ ಮಾಡಿಕೊಳ್ಳೊಕೆ ಅಹಿಂದ ನಾಯಕ ಅಂತ ಹೇಳುತ್ತಾರೆ,ದೆಹಲಿಗೆ ಹೋಗಿ ಅಹಿಂದ ಸಮಾವೇಶ ಮಾಡುತ್ತೆವೆ ಅಂತಾರೆ. ಯಾವ ಪುರುಷಾರ್ಥಕ್ಕೆ ಅಹಿಂದ ಸಮಾವೇಶ ಮಾಡುತ್ತಾರೆ, ಸಿದ್ದರಾಮಯ್ಯ ಅವರ ಖುರ್ಚಿಗೆ ಯಾವಾಗ ಕಂಟಕ ಬರುತ್ತೊ ಆಗ ಅಹಿಂದ ಸಮಾವೇಶ ನೆನಪಾಗುತ್ತೆ, ಸಿಎಂ ಸಿದ್ದರಾಮಯ್ಯ ಏಕ ದಿನ್‌ಕಾ, ದೋ ದಿನ್‌ಕಾ ಸಿಎಂ ಆಗಿದ್ದಾರೆ. ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗಿ ಅಹಿಂದ ಸಮಾವೇಶ ಮಾಡುತ್ತೆವೆ ಅಂತಾ ಕುಳಿತುಕೊಳ್ಳುತ್ತಾರೆ, ರಾಜ್ಯದಲ್ಲಿ ಬಿಸಿಲಿನ ತಾಪಮಾನಕ್ಕೆ ಜನ ನೀರಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.1
- Post by Suresh Belagere1